ಏಪ್ರಿಲ್ 26 ಶನಿವಾರ ವಿಟ್ಲದಲ್ಲಿ ಮಜ್ಲಿಸ್‌ನ್ನೂರ್ ಹಾಗೂ ಏಕದಿನ ಮತಪ್ರವಚನ
ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ವಿಟ್ಲ ಜಮಾಅತ್ ಯೂತ್ ವಿಂಗ್ ವತಿಯಿಂದ ನಡೆಸಲ್ಪಡುತ್ತಿರುವ ಮಜ್ಲಿಸ್‌ನ್ನೂರ್ ಹಾಗೂ ಮತಪ್ರವಚನ ಕಾರ್ಯಕ್ರಮವು 26-4–2025 ನೇ ಶನಿವಾರ ಇಶಾ ನಮಾಝ್ ನ ಬಳಿಕ ಖತೀಬರಾದ ಆರಿಫ್ ಬಾಖವಿಯವರ ನೇತೃತ್ವದಲ್ಲಿ ನಡೆಯಲಿದೆ.
ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಮಹಮ್ಮದ್ ರವರು ಅಧ್ಯಕ್ಷತೆ ವಹಿಸಲಿರುವರು.
ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು ,ಕಾರ್ಯದರ್ಶಿ ನಮೀರ್ ಹಳೆಮನೆ ,ಮಸೀದಿ ಉಪಾಧ್ಯಕ್ಷರಾದ ವಿ.ಎಸ್.ಇಬ್ರಾಹಿಂ, ಮಹಮ್ಮದ್ ಗಮಿ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ,ನಮೀರ್ ಹಳೆಮನೆ ಮುಂತಾದವರು ಉಪಸ್ಥಿತರಿರುವರು.
.





