December 15, 2025

ವಿಟ್ಲ: ಎಜ್ಯುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ವತಿಯಿಂದ ಪಿಯುಸಿ ಪರೀಕ್ಷೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

0
image_editor_output_image1648610965-1745595798561

ವಿಟ್ಲ: ಎಜುಕೇಶನಲ್ ಎಕ್ಸೆಲೆನ್ಸ್ ಪೌಂಡೇಶನ್ ವಿಟ್ಲ ಇದರ ವತಿಯಿಂದ ವಿಟ್ಲ ಹೋಬಳಿಯಲ್ಲಿ ದ್ವಿತೀಯ ಪಿಯುಸಿಯಲ್ಲಿ 90 ಶೇಕಡಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಾಗೂ ಎಸ್ಸೆಸ್ಸೆಲ್ಸಿ- ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ವಿಟ್ಲ ಕಛೇರಿಯಲ್ಲಿ ನಡೆಸಲಾಯಿತು.

ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಜನಾಬ್ ರಫೀಕ್ ಮಾಸ್ಟರ್( ಖ್ಯಾತ ಮೋಟಿವೇಶನಲ್ ಸ್ಪೀಕರ್) ರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡಿದರು.

ಹಾಗೆಯೇ ಮುಖ್ಯ ಅತಿಥಿಯಾಗಿ ಶ್ರೀಮತಿ ಸಪಿಯಾ ಕನ್ಯಾನ ( BA LLB) ಹಾಗೂ ಜನಾಬ್ ಅಬೂಬಕ್ಕರ್ ನೋಟರಿ ವಕೀಲರು ವಿಟ್ಲ ಭಾಗವಹಿಸಿದರು.

ಈ ಕಾರ್ಯಾಗಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು  ಎಜುಕೇಷನಲ್ ಎಕ್ಸೆಲೆನ್ಸ್ ಪೌಂಡೇಶನ್ ನ ಜನಾಬ್ ಶಂಸುದ್ದೀನ್ ಬೈರಿಕಟ್ಟೆಯವರ ನೇತೃತ್ವದಲ್ಲಿ ಹಾಗೂ ಸಹಕಾರದಿಂದ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ಸೆಂಟರ್ ನ ಟ್ಯೂಷನ್ ಶಿಕ್ಷಕಿ ಕುಮಾರಿ ನಾಫಿಯ ಅಳಿಕೆ ಸ್ವಾಗತಿಸಿದರು.ಕಾರ್ಯಾಗಾರದ ಮುಕ್ತಾಯದಲ್ಲಿ ವಿಟ್ಲ ಸೆಂಟರ್ ನ ಮೇಲ್ವಿಚಾರಕರಾದ ಜನಾಬ್ ಉಬೈದ್.ಕೆ ವಿಟ್ಲರವರು ಗಣ್ಯವ್ಯಕ್ತಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!