ಪತಿ, ಅತ್ತೆಯ ಕಿರುಕುಳಕ್ಕೆ ಮನನೊಂದು ಸಾಫ್ಟ್‌ವೇರ್ ಟೆಕ್ಕಿ ನೇಣು ಬಿಗಿದು ಆತ್ಮಹತ್ಯೆ
ತೆಲಂಗಾಣ: ಪತಿ ಹಾಗೂ ಅತ್ತೆಯ ಕಿರುಕುಳಕ್ಕೆ ಮನನೊಂದು ಸಾಫ್ಟ್‌ವೇರ್ ಟೆಕ್ಕಿ ಮಹಿಳೆಯು ಕನ್ನಡಿ ಮೇಲೆ ಕಾರಣ ಬರೆದಿಟ್ಟು ನೇಣಿಗೆ ಶರಣಾದ ಘಟನೆ ತೆಲಂಗಾಣದ ಜಗತ್ತಿಯಾಲ್‌ನಲ್ಲಿ ನಡೆದಿದೆ.
ಪ್ರಸನ್ನಲಕ್ಷ್ಮೀ (26) ಮೃತಪಟ್ಟ ಮಹಿಳೆ. ಪತಿ ಹಾಗೂ ಅತ್ತೆಯ ಕಿರುಕುಳ, ಅಲ್ಲದೇ ವರದಕ್ಷಿಣೆಯ ಕಿರುಕುಳದಿಂದಾಗಿ ಈಕೆ ಸಾವನ್ನಪ್ಪಿದ್ದಾಳೆ. 2 ವರ್ಷದ ಹಿಂದೆ ರಾಮನೂರು ಗ್ರಾಮದ ತಿರುಪತಿ ಎಂಬುವವನ ಜೊತೆ ಈಕೆಯ ಮದುವೆಯಾಗಿತ್ತು. ಮದುವೆ ಸಮಯದಲ್ಲಿ 55 ಲಕ್ಷ ವರದಕ್ಷಿಣೆ ಕೊಡಲು ಯುವತಿಯ ಮನೆಯವರು ಒಪ್ಪಿದ್ದರು. ಆದರೆ 10 ಲಕ್ಷ ಹಣ ಕೊಡಲು ಹಿಂದೇಟು ಹಾಕಿದ್ದರು. ಈ ಕಾರಣಕ್ಕಾಗಿ ಪ್ರತಿ ಬಾರೀ ಯುವತಿಗೆ ಅತ್ತೆ ಮತ್ತು ಪತಿ ಕಿರುಕುಳ ಕೊಡುತ್ತಿದ್ದನು.
ಇನ್ನು ದಂಪತಿಗಳಿಬ್ಬರೂ ಬೆಂಗಳೂರಿನ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಓರ್ವ ಪುತ್ರ ಹುಟ್ಟಿದ್ದಾನೆ. ನಮ್ಮಿಬ್ಬರಿಗೆ ಜನಿಸಿದ ಪುತ್ರ ಹೇಗೆ ಇಷ್ಟು ಸುಂದರವಾಗಿ ಇರಲು ಸಾಧ್ಯ. ಎಂದು ಆಗಾಗ್ಗೆ ಯುವತಿಗೆ ನಿಂದಿಸುತ್ತಿದ್ದ. ಇದನ್ನೆಲ್ಲಾ ಅರಿತು ಮನನೊಂದ ಯುವತಿ 5 ದಿನಗಳ ಹಿಂದೆ ತನ್ನ ತವರು ಮನೆಗೆ ಬಂದು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.





