ಅಕಸ್ಮಿಕವಾಗಿ ಗಡಿರೇಖೆ ದಾಟಿದ ಬಿಎಸ್‌ಎಫ್ ಯೋಧನನ್ನು ಬಂಧಿಸಿದ ಪಾಕಿಸ್ತಾನ ಸೇನೆ
ಪಂಜಾಬ್: ಫಿರೋಜ್‌ಪುರ ಸೆಕ್ಟರ್‌ನಲ್ಲಿ ಅಕಸ್ಮಿಕವಾಗಿ ಗಡಿರೇಖೆ ದಾಟಿದ ಬಿಎಸ್‌ಎಫ್ ಜವಾನ್ ಒಬ್ಬರನ್ನ ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದಾರೆ.
ಪಿ .ಕೆ ಸಿಂಗ್ ಬಂಧಿತ ಬಿಎಸ್‌ಎಫ್ ಯೋಧ ಎನ್ನಲಾಗಿದೆ. ಪಿಕೆ ಸಿಂಗ್ 182ನೇ ಬಿಎಸ್‌ಎಫ್ ಬೆಟಾಲಿಯನ್‌ನ ಕಾನ್‌ಸ್ಟೇಬಲ್ ಅಂತ ತಿಳಿದುಬಂದಿದೆ. ಯೋಧನ ಬಿಡುಗಡೆಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಬಿಎಸ್‌ಎಫ್ ಹಾಗೂ ಪಾಕ್ ರೇಂಜರ್‌ಗಳ ತುರ್ತು ಸಭೆ ಕರೆಯಲಾಗಿದೆ.
182ಮೇ ಬೆಟ್ಯಾಲಿಯನ್‌ನ ಬಿಎಸ್‌ಎಫ್ ಕಾನ್ಸ್ಟೇಬಲ್ ಪಿಕೆ ಸಿಂಗ್ ಬಂಧನಕ್ಕೊಳಗಾಗಿರುವ ಯೋಧ. ಪಿಕೆ ಸಿಂಗ್ ಬೇಸಿಗೆ ಬಿಸಲಿ ಝಳದಿಂದ ರೈತರ ಜೊತೆ ಮಾತಾನಾಡುತ್ತಾ ನೆರಳು ಹರಸಿ ನಡೆದುಕೊಂಡು ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಪಾಕ್ ಬಾರ್ಡರ್ ದಾಟಿದ್ದಾರೆ. ಈ ವೇಳೆ ಸೇನೆಯ ಸಮವಸ್ತ್ರದಲ್ಲಿದ್ದ ಪಿಕೆ ಸಿಂಗ್ ಗನ್ ಸಹ ಹೊಂದಿದ್ದರು.





