ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ನಿಂದ ಮಹಿಳೆಗೆ ಹಲ್ಲೆಗೆ ಯತ್ನ: ಪೊಲೀಸರಿಗೆ ದೂರು ನೀಡಿದ ಮಹಿಳೆ
ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ.ಬಸ್ ನಿರ್ವಾಹಕನೋರ್ವ ಪ್ರಯಾಣಿಕೆ ಮಹಿಳೆಗೆ ಹಲ್ಲೆ ನಡೆಸಲು ಮುಂದಾದ ಎಂಬ ಕಾರಣಕ್ಕೆ ಮಾತಿನ ಚಕಮಕಿ ನಡೆದು ಬಳಿಕ ಬಿ.ಸಿ ರೋಡಿನ ನಗರ ಠಾಣಾ ಪೋಲೀಸರಿಗೆ ಘಟನೆ ಬಗ್ಗೆ ದೂರು ನೀಡಿದ ಪ್ರಸಂಗ ನಡೆದಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುವ ಕೆಎಸ್.ಆರ್.ಟಿ.ಸಿ.ಬಸ್ ನಲ್ಲಿ ಬೆಂಗಳೂರು ಕಡೆಗೆ ತೆರಳುವ ಮಹಿಳೆಯ ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿರುವಂತದ್ದು. ಮಾರಿಪಳ್ಳ ಎಂಬಲ್ಲಿ ಬಸ್ ಕಂಡಕ್ಟರ್ ಅಪ್ರಾಪ್ತ ಬಾಲಕನಿಗೆ ಟಿಕೆಟ್ ತೆಗೆಯುವ ವಿಚಾರದಲ್ಲಿ ಮಹಿಳೆಯ ಜೊತೆ ತಗಾದೆ ತೆಗೆದಿದ್ದು, ಬಳಿಕ ಅವ್ಯಾಚ್ಚ ಶಬ್ದಗಳಲ್ಲಿ ನಿಂದಿಸಿದ್ದಲ್ಲದೆ, ಹಲ್ಲೆಗೂ ಮುಂದಾಗಿದ್ದ ಎಂದು ಆರೋಪಿಸಿ ಮಹಿಳೆಯ ಜೊತೆ ಇದ್ದ ಸಂಬಂಧಿಕ ಸಹಪ್ರಯಾಣಿಕರು ಬಸ್ ಕಂಡಕ್ಟರ್ ವಿರುದ್ದ ಪೋಲೀಸರಿಗೆ ದೂರು ನೀಡಿದ್ದಾರೆ.
ಟಿಕೆಟ್ ವಿಚಾರಕ್ಕೆ ತಗಾದೆ ತೆಗೆದ ಬಳಿಕ ಉಂಟಾದ ಗಲಾಟೆ ಬಸ್ ನಲ್ಲಿದ್ದ ಸಹಪ್ರಯಾಣಿಕರಿಗೆ ತುಂಬಾ ಕಿರಿಕಿರಿ ಉಂಟು ಮಾಡಿತ್ತು. ಬಸ್ ನಿರ್ವಾಹಕ ಮಹಿಳೆಯ ಮೇಲೆ ಹಲ್ಲೆಗೆ ಮುಂದಾದ ಸಂದರ್ಭದಲ್ಲಿ ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಅನ್ಯಾಯಕ್ಕೊಳಗಾದ ಪ್ರಯಾಣಿಕರು ಒತ್ತಾಯ ಮಾಡಿದ್ದಾರೆ. ಆದರೆ ಚಾಲಕ ಬಸ್ ನಿಲ್ಲಿಸಿದ ಸೀದಾ ಮುಂದೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರೋರ್ವರು ಬಂಟ್ವಾಳ ಪೋಲೀಸರಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದಾರೆ.
ಬಸ್ ಬಿ.ಸಿ ರೋಡು ತಲುಪುತ್ತಿದ್ದಂತೆ ಬಂಟ್ವಾಳ ನಗರಠಾಣಾ ಎಸ್.ಐ.ರಾಮಕೃಷ್ಣ ಅವರು ಬಸ್ ನ್ನು ನಿಲ್ಲಿಸಿ ನಿರ್ವಾಹಕನ ವರ್ತನೆಗೆ ಪೋಲೀಸ್ ಭಾಷೆಯಲ್ಲಿ ಬೈದು ಬುದ್ದಿ ಹೇಳಿ ಕಳಹಿಸಾಗಿದೆ. ನಿರ್ವಾಹಕನ ವರ್ತನೆಯಿಂದ ಬೇಸರಗೊಂಡ ಪ್ರಯಾಣಿಕರು ಬಸ್ ನಿಂದ ಇಳಿದು ಬೇರೆ ಬಸ್ ಮೂಲಕ ಬೆಂಗಳೂರಿಗೆ ತೆರಳಿದ್ದು, ಪ್ರಕರಣ ಯಾವುದೇ ಕೇಸು ದಾಖಲಾಗದೆ ಸುಖಾಂತ್ಯ ಕಂಡಿದೆ.
ಬೆಳಿಗ್ಗೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕೆಗೆ ಲೈಂಗಿಕ ಕಿರುಕುಳ ನೀಡಿದ ಕಾರಣಕ್ಕೆ ನಿರ್ವಾಹಕನನ್ನು ಸಸ್ಪಂಡ್ ಮಾಡಲಾದ ಘಟನೆ ನಡೆದಿದ್ದು, ರಾತ್ರಿ ವೇಳೆ ನಿರ್ವಾಹಕನೊರ್ವ ಮಹಿಳೆಗೆ ಹಲ್ಲೆ ಮಾಡಲು ಮುಂದಾಗಿರುವ ಘಟನೆ ನಡೆದಿದೆ ಎಂಬುದು ವಿಷಾಧನೀಯ ಎಂದು ಹೇಳಬೇಕಾಗಿದೆ.





