ಬೆಳ್ತಂಗಡಿ: ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದ ಬಂಟ್ವಾಳ ಮೂಲದ ಮಹಿಳೆ ಸಾವು
ಬೆಳ್ತಂಗಡಿ: ಶುಭ ಕಾರ್ಯಕ್ರಮಕ್ಕೆ ತೆರಳಿ ಹಿಂದಿರುಗುವ ವೇಳೆ ಎ. 21ರಂದು ತಡರಾತ್ರಿ ಇಲ್ಲಿನ ನಾಲ್ಕೂರು ಗ್ರಾಮದ ಕಲ್ಲಚದವು ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಸಂಭವಿಸಿದ್ದ ಅಪಘಾತದಿಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರೆ ಮಹಿಳೆ ಸಾವನ್ನಪ್ಪಿದ ಘಟನೆ ಎ.22ರಂದು ವರದಿಯಾಗಿದೆ.
ಮೃತ ಮಹಿಳೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಕೊಡಿಮಜಲು ಎಲಿಯನಡುಗೂಡು ನಿವಾಸಿ ಪ್ರತಿಮಾ (37) ಎಂದು ತಿಳಿದು ಬಂದಿದೆ.
ಪತಿ ಹರೀಶ್ ಜತೆಅವರು ತನ್ನ ಪತ್ನಿ ಪ್ರತಿಮಾ ಅವರನ್ನು ಅಳದಂಗಡಿಯಲ್ಲಿ ನಡೆದ ಶುಭ ಕಾರ್ಯಕ್ರಮವೊಂದಕ್ಕೆ ತೆರಳಿ ಗೋಳಿಯಂಗಡಿ ಕಡೆಗೆ ಬರುತ್ತಿರುವಾಗ ಇಳಿಜಾರು ರಸ್ತೆಯಲ್ಲಿ ಸ್ಕಿಡ್ ಆದ ಪರಿಣಾಮ ಹರೀಶ್ ದಂಪತಿ ರಸ್ತೆಗೆ ಬಿದ್ದರು.
ಈ ಘಟನೆಯಲ್ಲಿ ಹರೀಶ್ ಅವರಿಗೆ ಗಂಭೀರ ಗಾಯಗಳಾಗಿದ್ದರೆ ಪತ್ನಿ ಪ್ರತಿಮಾ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು.





