ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನ ಮೇಲೆ ಮುರಿದುಬಿದ್ದು ಮರ: ಕಾರು ಜಖಂ, ಅಪಾಯದಿಂದ ಪಾರು
ಮೂಡುಬಿದಿರೆ: ಸಂಜೆ ವೇಳೆ ಬೀಸಿದ ಭಾರೀ ಗಾಳಿ ಮಳೆಗೆ ಮರಗಳು, ವಿದ್ಯುತ್ ತಂತಿಗಳು ಉರುಳಿ ಬಿದ್ದು ಹಲವು ಕಡೆ ಹಾನಿಯುಂಟಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನಡೆದಿದೆ.
ಮೂಡುಬಿದಿರೆ -ಬಂಟ್ವಾಳ ರಾಜ್ಯ ಹೆದ್ದಾರಿ ಹಾದು ಹೋಗುವ ಬಿರಾವು ಗಾಜಿಗಾರ ಪಲ್ಕೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಮೇಲೆ ಮರ ಮುರಿದುಬಿದ್ದು ಕಾರು ಜಖಂಗೊಂಡಿದೆ. ಸುದೈವವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.





