ತರಬೇತಿ ವಿಮಾನ ಜನ ವಸತಿ ಪ್ರದೇಶದಲ್ಲಿ ಪತನ: ಓರ್ವ ಟ್ರೈನಿ ಪೈಲೆಟ್ ಸಾವು
ಗುಜರಾತ್: ವಿಮಾನ ಪೈಲೆಟ್ ತರಭೇತಿ ನೀಡುವ ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವೊಂದು ಜನ ವಸತಿ ಪ್ರದೇಶದಲ್ಲಿ ಪತನಗೊಂಡ ಪರಿಣಾಮ ಓರ್ವ ಟ್ರೈನಿ ಪೈಲೆಟ್ ಸಾವನಪ್ಪಿದ ಘಟನೆ ಗುಜರಾತ್ ನ ಅಮ್ರೇಲಿಯಲ್ಲಿ ನಡೆದಿದೆ.
ಮಂಗಳವಾರ ಮಧ್ಯಾಹ್ನ 12:30 ರ ಸುಮಾರಿಗೆ ಅಮ್ರೇಲಿ ಪಟ್ಟಣದ ಗಿರಿಯಾ ರಸ್ತೆಯ ವಸತಿ ಪ್ರದೇಶದಲ್ಲಿನ ಮರವೊಂದರ ಮೇಲೆ ಬಿದ್ದ ವಿಮಾನ ತದನಂತರ ನೆಲಕ್ಕೆ ಬಿದ್ದು ಪತನಗೊಡಿದೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.




