May 1, 2026

ಮಸಾಲೆ ದೋಸೆ ತಿಂದು 3 ವರ್ಷದ ಬಾಲಕಿ ಸಾವು

0
image_editor_output_image1480930605-1745322826060.jpg

ಕೇರಳ: 3 ವರ್ಷದ ಬಾಲಕಿಯೊಬ್ಬಳು ಮಸಾಲೆ ದೋಸೆ ತಿಂದು ಸಾವನ್ನಪ್ಪಿದ ಘಟನೆ ಕೇರಳದ ತ್ರಿಪೂರ್‌ನಲ್ಲಿ ನಡೆದಿದೆ.

ಒಲಿವಿಯಾ (3) ಮೃತ ಬಾಲಕಿ ಎಂದು ತಿಳಿದು ಬಂದಿದೆ. ತ್ರಿಶೂರ್‌ನ ವೆಂಡೂರಿನ ಅಳಗಪ್ಪ ಮೈದಾನದ ಕಲ್ಲೂಕರನ್ ಹೆನ್ರಿ ಅವರ ಪುತ್ರಿಯಾಗಿದ್ದು ವಿದೇಶದಲ್ಲಿ ವಾಸವಾಗಿದ್ದರು. ವಿದೇಶದಿಂದ ಕೇರಳಕ್ಕೆ ಮರಳಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಹೆನ್ರಿ ಅವರ ಕುಟುಂಬ ನೆಡುಂಬಸ್ಸೆರಿ ವಿಮಾನ ನಿಲ್ದಾಣಕ್ಕೆ ಬಂದಿತ್ತು.

ಅಲ್ಲಿಂದ ಮನೆಗೆ ತೆರಳುವ ವೇಳೆ ಅಂಗಮಾಲಿ ಬಳಿಯ ಕರಯಂಪರಂನಲ್ಲಿರುವ ಹೊಟೇಲ್‌ನಲ್ಲಿ ಮಸಾಲೆ ದೋಸೆ ತಿಂದಿದ್ದರು. ಮನೆಗೆ ಬಂದಾಗ ಎಲ್ಲರೂ ದೈಹಿಕವಾಗಿ ಅಸ್ವಸ್ಥರಾಗಿದ್ದರು.

ಹೆನ್ರಿ ಹಾಗೂ ಅವರ ಕುಟುಂಬವನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಒಲಿವಿಯಾ ಆರೋಗ್ಯ ತುಂಬಾ ಹದಗೆಟ್ಟಿದ್ದರಿಂದ ತಕ್ಷಣ ಪುತ್ತುಕ್ಕಾಡ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಚಿಕಿತ್ಸೆ

ಮಸಾಲೆ ದೋಸೆಯಲ್ಲಿ ವಿಷಕಾರಿ ಅಂಶ ಇತ್ತೇನೋ ಎಂದು ಶಂಕಿಸಲಾಗಿದೆ. ಪೊಲೀಸರು ಹೊಟೇಲ್ ವಿರುದ್ಧ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!