ಹಾಸನ: ನಾಳೆ (ಗುರುವಾರ) ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್, ದಿನ ನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ : ಯೂತ್ ಕಾಂಗ್ರೆಸ್ ನ ರಂಗಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ
ಹಾಸನ: ನಗರದಲ್ಲಿ ಗುರುವಾರ ಬೆಳಿಗ್ಗೆ 11.30 ಕ್ಕೆ ತಣ್ಣೀರುಹಳ್ಳದಿಂದ ಆದಾಯ ತೆರಿಗೆ ಇಲಾಖೆ ಕಚೇರಿವರೆಗೂ ಹಾಸನ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್, ದಿನ ನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಎಲ್ಲರೂ ಸೇರಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಇಂದು ಸುದ್ದಿಗೋಷ್ಠಿಯಲ್ಲಿ ಯೂತ್ ಕಾಂಗ್ರೆಸ್ ನ ರಂಗಸ್ವಾಮಿ ಅವರು ತಿಳಿಸಿದರು.
ಅವರು ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 1 ಬ್ಯಾರಲ್ ಕಚ್ಚಾ ತೈಲದ ಬೆಲೆ 108 ರೂ ಬ್ಯಾರಲ್‌ಗಿತ್ತು. ಇವತ್ತು 64 ರೂ ಬ್ಯಾರಲ್ ಬೆಲೆ ಇಳಿಮುಖ ಕಂಡಿದ್ದು, ದರ ಕುಸಿದರು ಸಹ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಕೆ ಕಂಡಿಲ್ಲ. ಯು.ಪಿ.ಎ. ಸರ್ಕಾರ ಇಂದಂತಹ ಸಂದರ್ಭದಲ್ಲಿ ಗ್ಯಾಸ್ ಬೆಲೆ 414 ರೂ ಇತ್ತು. ಈಗಿನ ಎನ್.ಡಿ.ಎ. ಸರ್ಕಾರದಲ್ಲಿ ಗ್ಯಾಸ್ ಬೆಲೆ ರೂ.1150 ರೂ.ಗಳಿವೆ ಮತ್ತು ಗೃಹ ನಿರ್ಮಾಣದ ವಸ್ತುಗಳಾದಂತಹ ಸಿಮೆಂಟ್ ಬೆಲೆ 250 ರಿಂದ 450 ರೂ.ಗಳಿವೆ ಮತ್ತು ಕಬ್ಬಿಣದ ಬೆಲೆ 35 ರೂ. ಇದ್ದು, ಈಗ ಕಬ್ಬಿಣದ ಬೆಲೆ 75 ರಿಂದ 80 ರೂ.ಗಳಾಗಿವೆ. ದಿನ ನಿತ್ಯದ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಮತ್ತು ಟೋಲ್ ರಸ್ತೆಗಳ ಮೇಲೆ ಬೆಲೆ ಏರಿಕೆ 50 ರೂಗಳಿದ್ದು, ಈಗ ಟೋಲ್‌ಗಳ ಬೆಲೆ 100 ರೂ.ಆಗಿದೆ. ರೈಲ್ವೆ ಪ್ಲಾಟ್ ಫಾರಮ್‌ಗೆ ರೂ.5 ರಿಂದ ರೂ.50 ಗಳವರೆಗೆ ಹೆಚ್ಚಳ ಮಾಡಿದೆ. ಪ್ರತಿ ಮನೆಯಲ್ಲಿ 5 ಜನರಿದ್ದರೆ 5 ಮೊಬೈಲ್‌ಗೆ 1500 ಗಳಾಗಿರುತ್ತವೆ. ಯು.ಪಿ.ಎ. ಸರ್ಕಾರದಲ್ಲಿ ಫ್ರೀ ಸಿಮ್ ಕಾರ್ಡ್ ನೀಡುತ್ತಿದ್ದಾರೆ. ಆದರೆ ಎನ್.ಡಿ.ಎ. ಸರ್ಕಾರದವರು ಒಂದು ತಿಂಗಳಿಗೆ 350 ರೂಗಳನ್ನು ಜನರಿಂದ ಸೂಲಿಗೆ ಮಾಡುತ್ತಿದ್ದಾರೆ ಇದೇ ಕೇಂದ್ರ ಸರ್ಕಾರದ ಸಾಧನೆಯೇ?
ಪ್ರತಿಯೊಬ್ಬರ ಮನೆಯಲ್ಲಿ ಕೇಬಲ್‌ಗೆ ತಿಂಗಳಿಗೆ ರೂ.80/- ಗಳಿದ್ದು, ಇತ್ತೀಚಿನ ದಿನಗಳಲ್ಲಿ ಅದು 350 ರೂ.ಗಳಿಗೆ ಜನರಿಂದ ಕೇಂದ್ರ ಸರ್ಕಾರದವರು ಸೂಲಿಗೆ ಮಾಡುತ್ತಿದ್ದಾರೆ. ದ್ವಿ ಚಕ್ರ ವಾಹನಗಳ ಮೇಲೆ ಬೆಲೆ 40 ಸಾವಿರ ಇತ್ತು. ಆದರೆ ಎನ್.ಡಿ.ಎ. ಸರ್ಕಾರ ಬಂದ ಮೇಲೆ ಬೈಕುಗಳ ಬೆಲೆ ಲಕ್ಷಕ್ಕಿಂತ ಹೆಚ್ಚಾಗಿದೆ ಮತ್ತು ಟ್ಯಾಕ್ಸ್ ಕಟ್ಟಿರುವುದರಲ್ಲಿ ರಾಷ್ಟ್ರದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದೆ. ಆದರೆ ಕರ್ನಾಟಕಕ್ಕೆ ನೀಡಬೇಕಾದ ತೆರಿಗೆ ಪಾಲಿನಲ್ಲಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಕರ್ನಾಟಕ ಜನರ ತೆರಿಗೆ ಪಾಲನ್ನು ಸರಿಯಾಗಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ತೆರಿಗೆ ಇಲಾಖೆಗೆ ಮುತ್ತಿಗೆ ಹಾಕುವ ಮೂಲಕ ಹೋರಾಟವನ್ನು ಮಾಡುತ್ತೇವೆ ಎಂದರು. ಡಾಲರ್ ಬೆಲೆ ಯು.ಪಿ.ಎ. ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಒಂದು ಡಾಲರ್‌ಗೆ 60 ರೂಪಾಯಿಗಳಿದ್ದವು. ಎನ್.ಡಿ.ಎ. ಸರ್ಕಾರದಲ್ಲಿ 1 ಡಾಲರ್ ಗೆ 90 ರೂಗಳಾಗಿದ್ದು ಅಭಿವೃದ್ಧಿಗಳಾಗಿವೆ ಎಂಬುದನ್ನು ಕೇಂದ್ರ ಭ್ರಷ್ಟ ಸರ್ಕಾರದವರು ಉತ್ತರ ಕೊಡಬೇಕಾಗಿದೆ. ಕೇಂದ್ರ ಸರ್ಕಾರವು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿರವರ ಮೇಲೆ ಚಾರ್‌ಶೀಟ್ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುವುದೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುನೀತ್, ಸಮೀರ್ ಪಾಷಾ, ಶರತ್, ರವಿಕಿರಣ್ ಹಾಗೂ ಇತರರು ಉಪಸ್ಥಿತರಿದ್ದರು.





