May 1, 2025

ಕಾಸರಗೋಡು: ಮಂಗಳೂರಿಗೆ ತೆರಳಿದ್ದ ವೇಳೆಗೆ ಮನೆಗೆ ನುಗ್ಗಿ ನಗ-ನಗದು ಕಳ್ಳತನ

0

ಕಾಸರಗೋಡು: ಮನೆಗೆ ನುಗ್ಗಿದ ಕಳ್ಳರು ಎಂಟು ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ.ನಗದು ಕಳವುಗೈದ ಘಟನೆ ಪೆರ್ಲ ದಲ್ಲಿ ನಡೆದಿದೆ.

ಪೆರ್ಲ ಇಡಿಯಡ್ಕ ದ ಅಬ್ಬಾಸ್ ಆಲಿ ರವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯ ಹಿಂಭಾಗದ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಕೋಣೆಯ ಲ್ಲಿದ್ದ ಕಪಟನ್ನು ಮುರಿದು ಕಳವು ಮಾಡಲಾಗಿದೆ. ಮನೆಯವರು ಮಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!