ಹಾಸನ: ವಕ್ಫ್ ಮಸೂದೆ -2025 ನ್ನು ವಿರೋಧಿಸುವ ಬಗ್ಗೆ ಹಾಸನದ ಖುಬಾ ಕನ್ವೆಷನ್ ಹಾಲ್ ನಲ್ಲಿ ಪೂರ್ವ ಭಾವಿ ಸಭೆ
ಹಾಸನ: ಕೇಂದ್ರದ ಬಿಜೆಪಿ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಕ್ಫ್ ಮಸೂದೆ -2025 ನ್ನು ವಿರೋಧಿಸುವ ಬಗ್ಗೆ ಹಾಸನ ನಗರದ ಖುಬಾ ಕನ್ವೆಷನ್ ಹಾಲ್ ನಲ್ಲಿಪೂರ್ವ ಬಾವಿ ಸಭೆ ನಡೆಯಿತು.

ಈ ಸಭೆಗೆ ಹಾಸನ ನಗರದ ಎಲ್ಲಾ ಮಸೀದಿ ಮದ್ರಸ,ಗಳ ಇಮಾಮರು ಮೋಹಝ್ನ್ ಗಳು,ಈದ್ ಗಾ, ಕಬ್ರಸ್ತಾನ್ ದರ್ಗಾ ವಕ್ಫ್ ಬೋರ್ಡ್ ಮಾಜಿ ಸದಸ್ಯರುಗಳು ಗಳು, ಮಸೀದಿ ಸಮಿತಿಗಳ ಅಧ್ಯಕ್ಷರು,ಪದಾಧಿಕಾರಿಗಳು,ಹಾಗೂ ಇತರ ಸಂಘ ಸಂಸ್ಥೆಗಳು ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರುಗಳು ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳು ನೀಡಿದರು.
ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಈ ಸಭೆಯನ್ನು ಆಯೋಜಿಸಿದ್ದರು.





