ವಿಟ್ಲದ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ SNAPSHOT ಸ್ಟುಡಿಯೋ ಹಾಗೂ ಟೂರ್ಸ್ ಅ್ಯಂಡ್ ಟ್ರಾವೆಲ್ಸ್ ಶುಭಾರಂಭ
ವಿಟ್ಲ; ವಿಟ್ಲ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ SNAPSHOT ಸ್ಟುಡಿಯೋ ಹಾಗೂ ಟೂರ್ಸ್ ಅ್ಯಂಡ್ ಟ್ರಾವೆಲ್ಸ್ ಶುಭಾರಂಭಗೊಂಡಿತು.
ವಿಟ್ಲ ಕೇಂದ್ರ ಜುಮಾ ಮಸೀದಿ ಮುಅದ್ಸಿನ್ ಹಾಜಿ ಅಬ್ದುಲ್ ಹಕೀಂ ಅರ್ಷದಿ ದುವಾ ನೆರವೇರಿಸಿದರು.
ಕೆ.ಎಸ್ ಗ್ರೂಪ್ ನ ಹಮೀದ್ ಕೆ.ಎಸ್,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ಸೈಬರ್ ಪೋಯಿಂಟ್ ನ ಪಿ.ಎಂ.ಅಶ್ರಫ್, ಮೊಯ್ದೀನ್ ನಡುಪದವು, ನ್ಯಾಯವಾದಿ ಪದ್ಮನಾಭ ಪೂಜಾರಿ ಸಣ್ಣಗುತ್ತು,ಶಾಕಿರ್ ಅಳಕೆಮಜಲು,ರಹೀಂ ಕುಂಡಡ್ಕ,ಖಲಂದರ್ ಪರ್ತಿಪ್ಪಾಡಿ, ಮುಂತಾದವರು ಶುಭ ಹಾರೈಸಿದರು.
ಮಾಲಕ ನಾಸಿರ್ ರವರು ಸ್ವಾಗತಿಸಿ, ಇಲ್ಲಿ ಎಲ್ಲಾ ರೀತಿಯ ಪ್ರಿಂಟಿಂಗ್, ಫೋಟೋ ಸ್ಟುಡಿಯೋ, ಗಿಫ್ಟ್ ಐಟಂಗಳು,ಟೂರ್ಸ್ ಪ್ಯಾಕೇಜ್, ಪ್ರವಾಸಿ ಇನ್ಸೂರೆನ್ಸ್,ಮನಿ ಎಕ್ಸ್‌ಚೇಂಜ್,ರೈಲ್ವೆ, ಏರ್ ಟಿಕೆಟ್, ಪ್ರವಾಸಿ ವಾಹನಗಳು ಮುಂತಾದ ಸೌಲಭ್ಯಗಳಿವೆ ಎಂದು ಹೇಳಿದರು.





