ಶೇ.79ರಷ್ಟು ಫಲಿತಾಂಶ ಸಾಕಾಗಲಿಲ್ಲ ಎಂದು ಮನನೊಂದು ಪಿಯುಸಿ ವಿದ್ಯಾರ್ಥಿಯ ಆತ್ಮಹತ್ಯೆ
ಅರಸೀಕೆರೆ: ಪಿಯುಸಿ ವಿದ್ಯಾರ್ಥಿ ಕೆ.ಪಿ. ಮನೋಜ್ ( 17), ನಿರೀಕ್ಷೆಯಂತೆ ಫಲಿತಾಂಶ ಬರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಅನಂತ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಮನೋಜ್, ಪಿಸಿಎಂಬಿ ವಿಭಾಗ ಆಯ್ಕೆ ಮಾಡಿಕೊಂಡಿದ್ದ. ಎಸ್‌ಎಸ್‌ಎಲ್‌ಸಿ ಯಲ್ಲಿ 98% ಅಂಕಗಳನ್ನು ಗಳಿಸಿದ್ದ ಆತನು, ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ 79% ಅಂಕಗಳನ್ನು ಪಡೆದಿದ್ದ. ಆದರೆ ನಿರೀಕ್ಷಿತ ಶೇಕಡಾವಾರು ಅಂಕಗಳು ಬರದಿದ್ದ ಪರಿಣಾಮ, ತೀವ್ರ ಹತಾಶೆಗಾಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಎಂದು ಕುಟುಂಬದವರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಮತ್ತಷ್ಟು ತನಿಖೆ ನಡೆಯುತ್ತಿದೆ.




