ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆಗೈದು ರಸ್ತೆಗೆ ಎಸೆದ ದುಷ್ಕರ್ಮಿಗಳು
ಬೆಂಗಳೂರು: ದುಷ್ಕರ್ಮಿಗಳು ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ರಸ್ತೆಗೆ ಎಸೆದಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊ*ಲೆಯಾದ ವ್ಯಕ್ತಿ ಮೈಸೂರು ರಸ್ತೆ ಅಂಚೆಪಾಳ್ಯ ನಿವಾಸಿ ಸಮೀರ್ (26) ಎಂದು ಗುರುತಿಸಲಾಗಿದೆ. ಬನಶಂಕರಿ 6ನೇ ಹಂತದ 7ನೇ ಬ್ಲಾಕ್ ತುರಹಳ್ಳಿ ಫಾರೆಸ್ಟ್ ಪಕ್ಕದ ರಸ್ತೆಯಲ್ಲಿ ಭಾನುವಾರ ರಾತ್ರಿ ದುರ್ಘಟನೆ ನಡೆದಿದೆ.
ಸಮೀರ್ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.





