March 12, 2026

ಬೆಳ್ತಂಗಡಿ: ತರಕಾರಿ ಸಾಗಾಟದ ವಾಹನದಲ್ಲಿ ಗೋವುಗಳ ಸಾಗಾಟ ಪತ್ತೆ: ಮೇಲ್ಭಾಗದಲ್ಲಿ ತರಕಾರಿ, ಕೆಳಭಾಗದಲ್ಲಿ 15ಕ್ಕೂ ಹೆಚ್ಚು ಗೋವುಗಳು ಪತ್ತೆ

0
image_editor_output_image1900729559-1743742879353

ಬೆಳ್ತಂಗಡಿ: ಇಂದು ಮುಂಜಾನೆ, ಬೆಳ್ತಂಗಡಿ ತಾಲೂಕಿನ ಕಳಿಯ ನ್ಯಾಯತರ್ಪು ಸಮೀಪದ ಜಾರಿಗೆಬೈಲು ಎಂಬಲ್ಲಿ, ತರಕಾರಿ ಸಾಗಾಟದ ವಾಹನವೊಂದರಲ್ಲಿ ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ಗೋವುಗಳನ್ನು ಮಂಗಳೂರಿನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾಲವನ್ನು ಭೇದಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ಯುವಕರು ವಾಹನವನ್ನು ಹಿಂಬಾಲಿಸಿ ತಡೆದಿದ್ದಾರೆ. ವಾಹನವನ್ನು ಪರಿಶೀಲಿಸಿದಾಗ, ಮೇಲ್ಭಾಗದಲ್ಲಿ ತರಕಾರಿಗಳನ್ನು ತುಂಬಿ, ಕೆಳಭಾಗದಲ್ಲಿ ಅತ್ಯಂತ ಕ್ರೂರವಾಗಿ ಸುಮಾರು 15ಕ್ಕೂ ಹೆಚ್ಚು ಗೋವುಗಳನ್ನು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.

ಕಾರ್ಯಕರ್ತರು ಸೌಜನ್ಯ ಹೋರಾಟದ ಪ್ರಚಾರದ ಸಲುವಾಗಿ ಬಿತ್ತಿ ಪತ್ರಗಳನ್ನು ತಡರಾತ್ರಿ ಆಂಟಿಸುವ ಕೆಲಸದಲ್ಲಿದ್ದ ಕಾರ್ಯಕರ್ತರಿಗೆ ಸಂಶಯಾಸ್ಪದಕವಾಗಿ ಪಿಕಪ್ ಒಂದರಲ್ಲಿ ದನ ಸಾಗಿಸುವುದು ಕಂಡು ಬಂದು ಗುರುವಾಯನಕೆರೆಯಿಂದ ಬೆನ್ನಟ್ಟಿ ಜಾರಿಗೆಬೈಲಿನಲ್ಲಿ ತಡೆದಾಗ ಮೇಲುಗಡೆಯಿಂದ ಬಾಳೆಗೊಣೆ ಸಾಗಿಸುವ ವಾಹನದಂದೆ ಬಿಂಬಿಸಿ ಅಡಿಭಾಗದಲ್ಲಿ ಅಮಾನುಷವಾಗಿ 15 ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವು ಕಂಡುಬಂದಿದೆ. ಗೋವುಗಳನ್ನ ರಕ್ಷಿಸಿ ಪೋಲಿಸರಿಗೆ ಒಪ್ಪಿಸಲಾಗಿದೆ.

ಈ ಸಂದರ್ಭದಲ್ಲಿ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ, ಗೋವುಗಳನ್ನು ತುಂಬಿದ್ದ ವಾಹನವನ್ನು ವಶಕ್ಕೆ ಪಡೆದು, ರಕ್ಷಿಸಲಾದ ಗೋವುಗಳ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ.

ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ. ಈ ಗೋವುಗಳನ್ನು ತಾಲೂಕಿನ ವಿವಿಧ ಭಾಗಗಳಿಂದ ಸಂಗ್ರಹಿಸಿ ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!