March 4, 2026

ಕುಂದಾಪುರ: ವೃದ್ಧೆಯೊಂದಿಗೆ ಮನೆಯವರಂತೆ ಮಾತನಾಡಿ ಚಿನ್ನಾಭರಣ ಕಳವು

0
image_editor_output_image98888491-1742773064203.jpg

ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳನೋರ್ವ ವೃದ್ಧೆಯೊಂದಿಗೆ ಮನೆಯವರಂತೆ ಮಾತನಾಡಿ ಆಕೆಯ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಮಣೂರಿನಲ್ಲಿ ಮಾ.20ರಂದು ನಡೆದಿದೆ.

ರುದ್ರಮ್ಮ(92) ಚಿನ್ನ ಕಳೆದುಕೊಂಡಿರುವ ವೃದ್ಧೆ. ಮಾ.20ರಂದು ಮನೆಯವರೆಲ್ಲ ಸ್ಥಳೀಯ ಕೊಟ್ಟೂರು ದೇಗುಲದ ಜಾತ್ರೆಗೆಂದು ತೆರಳಿದ್ದರು. ಈ ವೇಳೆ ಮನೆಯಲ್ಲಿ ರುದ್ರಮ್ಮ ಒಬ್ಬರೇ ಮನೆಯಲ್ಲಿ ಇದ್ದರು. ದಿನನಿತ್ಯದಂತೆ ಅವರು ಮಲಗುವಾಗ ತಾನು ಧರಿಸಿದ್ದ ಚಿನ್ನದ ಸರವನ್ನು ಮಂಚದ ಮೇಲೆ ಕಳಚಿಟ್ಟಿದ್ದರು. ಜಾತ್ರೆಗೆ ತೆರಳಿದ್ದ ಅವರ ಅಳಿಯ ಶ್ರೀಧರ್ ಅವರು ದಿಢೀರನೇ ಮನೆಗೆ ಬಂದಿದ್ದು, ಈ ವೇಳೆ ಮನೆಯ ಬಾಗಿಲು ಒಡೆದಿರುವುದು ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!