ಹೋಳಿ ಆಟವಾಡಿ ಕೆರೆಯಲ್ಲಿ ಸ್ನಾನಕ್ಕೆ ಹೋದ ಬಾಲಕ ನೀರಲ್ಲಿ ಮುಳುಗಿ ಮೃತ್ಯು
ಗದಗ: ಹೋಳಿ ಹಬ್ಬದ ಸಂದರ್ಭದಲ್ಲಿ ಗ್ರಾಮದ ತುಂಬೆಲ್ಲಾ ರಂಗುರಂಗಿನ ಹೋಳಿ ಆಟವಾಡಿ ಕೆರೆಯಲ್ಲಿ ಸ್ನಾನಕ್ಕೆ ಹೋದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗುಂಡೇಶ್ವರ ಕೆರೆಯಲ್ಲಿ ದೇವೇಂದ್ರ ರಾಚನಗೌಡ (16) ಮೃತಪಟ್ಟಿದ್ದಾನೆ. ದೇವೇಂದ್ರ ಬೆಳಗ್ಗೆಯಿಂದ ಸ್ನೇಹಿತರೊಂದಿಗೆ ಊರಲ್ಲಿ ಬಣ್ಣದ ಹೋಳಿ ಆಟವಾಡಿದ್ದಾನೆ. ನಂತರ ನಾಲ್ಕು ಜನ ಸ್ನೇಹಿತರು ಒಟ್ಟಾಗಿ ಕೆರೆಗೆ ಈಜಲು ಹೋಗಿದ್ದರು.





