ಕ್ರಿಕೆಟ್ ಆಡಲು ಹೋಗಿದ್ದ ಯುವಕ ಅನುಮಾನಸ್ಪದ ಸಾವು

ಮೈಸೂರು: ಕ್ರಿಕೆಟ್ ಆಡಲು ಹೋಗಿದ್ದ ಯುವಕ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆಯ ವಡ್ಡರಗುಡಿಯಲ್ಲಿ ನಡೆದಿದೆ.
ವಡ್ಡರಗುಡಿ ಗ್ರಾಮದ ಯುವಕ ದಿವ್ಯಾ ಕುಮಾರ್ ಅನುಮಾನಸ್ಪಾದವಾಗಿ ಮೃತಪಟ್ಟ ಯುವಕ. ಬೀಚನಹಳ್ಳಿಯಲ್ಲಿ 9 ದಿನಗಳ ಹಿಂದೆ ನಡೆದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜೆಪಿ ವಾರಿಯರ್ಸ್ ವಿರುದ್ಧ ಸಿಕ್ಸ್ ಹೊಡೆದು ದಿವ್ಯಾ ಕುಮಾರ್ ತನ್ನ ತಂಡವನ್ನು ಗೆಲ್ಲಿಸಿದ್ದ. ಮ್ಯಾಚ್ ಗೆದ್ದ ಬಳಿಕ ಪಾರ್ಟಿ ಮುಗಿಸಿ ಬೈಕ್ ನಲ್ಲಿ ಊರಿಗೆ ಹೊರಟಿದ್ದ.