ಸಮಸ್ತ ಪಬ್ಲಿಕ್ ಪರೀಕ್ಷೆ: ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್‌ಗೆ 100% ಫಲಿತಾಂಶ

ವಿಟ್ಲ: ಹೊರೈಝನ್ ಪಬ್ಲಿಕ್ ಸ್ಕೂಲ್ ವಿಟ್ಲ ಇದರ ಮದರಸ ವಿಭಾಗವು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 5,7 & 10 ನೇ ತರಗತಿ ಪಬ್ಲಿಕ್ ಪರೀಕ್ಷೆಗಳಲ್ಲಿ 100% ಫಲಿತಾಂಶ ದಾಖಲಿಸಿರುತ್ತದೆ. ಈ ಬಾರಿ ಐದನೇ ತರಗತಿಯಲ್ಲಿ 36, ಏಳನೆ ತರಗತಿಯಲ್ಲಿ 50 ಹಾಗೂ ಹತ್ತನೇ ತರಗತಿಯಲ್ಲಿ 31 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 117 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಐದನೇಯ ತರಗತಿಯಲ್ಲಿ 4 ಡಿಸ್ಟಿಂಕ್ಷನ್ ಹಾಗೂ ಏಳನೇಯ ತರಗತಿಯಲ್ಲಿ 9 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧನೆ ಮಾಡಿರುತ್ತಾರೆ.