ವಿಟ್ಲ: ಖಾಸಗಿ ಬಸ್ ನಿಲ್ದಾಣ ಬಳಿ “ವಾಕ್ ಫೂಟ್‌ವೇರ್” (WALK FOOT WEAR) ಶುಭಾರಂಭ: ಪುರುಷರ, ಮಹಿಳೆಯರ, ಮಕ್ಕಳ ಪಾದರಕ್ಷೆಗಳ ಮಿತದರಲ್ಲಿ ಮಾರಾಟ

ವಿಟ್ಲ: ವಿಟ್ಲ ಖಾಸಗಿ ಬಸ್ ನಿಲ್ದಾಣ ಬಳಿಯ ಕ್ಯಾಂಪ್ಕೋ ರಸ್ತೆಯ ಅನುಗ್ರಹ ಕಾಂಪ್ಲೆಕ್ಸ್ ನಲ್ಲಿ “ವಾಕ್ ಫೂಟ್‌ವೇರ್ (WALK FOOT WEAR) ಶುಭಾರಂಭಗೊಂಡಿದೆ.


ಶೈಖುನಾ ಮಹಮೂದಲ್ ಫೈಝಿ ವಾಲೆಮುಂಡೋವು ಉಸ್ತಾದ್ ಉದ್ಘಾಟಿಸಿ,ದುವಾ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ, ಉಧ್ಯಮಿ ವಿ.ಎಚ್ .ಅಶ್ರಫ್, ಜಾಫರ್ ಖಾನ್, ಅಬ್ದುಲ್ಲಾ ಅನಿಲಕಟ್ಟೆ, ಹೈದರ್ ನೀರ್ಕಜೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ಮೋನಪ್ಪ ಗೌಡ ಕಡಂಬು, ಅಝೀಝ್ ಪೆರ್ಲ, ಲತೀಫ್ ಅನಿಲಕಟ್ಟೆ, ಸುಲೈಮಾನ್ ಒಕ್ಕೆತ್ತೂರು, ಅಬ್ದುಲ್ ಖಾದರ್ ಪೆರ್ಲ, ಅಝರುದ್ದೀನ್ ಒಕ್ಕೆತ್ತೂರು, ಜಾನಿ, ಮನೋಹರ, ಮುಂತಾದವರು ಶುಭ ಹಾರೈಸಿದರು.
ಇಲ್ಲಿ ಪುರುಷರ ಮಹಿಳೆಯರ ಮಕ್ಕಳ ಎಲ್ಲಾ ರೀತಿಯ ನವೀನ ಮಾದರಿಯ ಪಾದರಕ್ಷೆ, ಶೂ ಮುಂತಾದವುಗಳು ಹಿತ ಮಿತ ದರದಲ್ಲಿ ದೊರೆಯುತ್ತವೆ ಎಂದು ಮಾಲಕರಾದ ಫಯಾಝ್ ಅನಿಲಕಟ್ಟೆ ತಿಳಿಸಿದರು.