ವಿಟ್ಲ: ಇಫ್ತಾರ್ ಫುಡ್ ಹೆಸರಿನಲ್ಲಿ ಜನರಿಗೆ ವಂಚನೆ: ಕಳಪೆ ಗುಣಮಟ್ಟದ ವಸ್ತುಗಳಿಂದ ತಯಾರಿಸಲಾದ ತಿಂಡಿಗೆ ದುಬಾರಿ ದರ

ವಿಟ್ಲ: ಇಫ್ತಾರ್ ತಿಂಡಿ ತಿನಿಸು ಹೆಸರಿನಲ್ಲಿ ವಿಟ್ಲದಲ್ಲಿ ಕಲಬೆರಕೆ ಆಹಾರ ನೀಡಿ ಜನರನ್ನು ವಂಚನೆ ಮಾಡಲಾಗುತ್ತಿದೆ.
ಪವಿತ್ರ ರಂಝಾನ್ ಹಬ್ಬ ಪ್ರಾರಂಭವಾದ ದಿನದಿಂದ ಪೇಟೆಯ ಅಲ್ಲಲ್ಲಿ ಸ್ಟಾಲ್ ಗಳನ್ನು ವ್ಯಾಪಾರ ಮಾಡಲಾಗುತ್ತಿದೆ. ಈ ಇಫ್ತಾರ್ ಫುಡ್ ನಲ್ಲಿ ಸಮೂಸ, ಚಿಕನ್ ರೋಲ್, ಬ್ರೂಸ್ಟಡ್ ಚಿಕಿನ್ ಹೀಗೆ ಅನೇಕ ಬಗೆಯ ತಿಂಡಿಗಳನ್ನು ಮಾರಾಟಕ್ಕೆ ಇಡಲಾಗುತ್ತಿದೆ. ಈ ಆಹಾರ ತಯಾರಿಸಲು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಜನರು ದುಪ್ಪಟ್ಟು ಹಣ ನೀಡಿ ಖರೀದಿಸುತ್ತಿದ್ದಾರೆ. ಕಳಪೆ ಗುಣಮಟ್ಟದ ವಸ್ತುಗಳಿಂದ ತಯಾರಿಸುವ ಈ ಆಹಾರದಿಂದ ಅನಾರೋಗ್ಯ ಪೀಡಿತರಾಗುವ ಸಾಧ್ಯತೆಗಳಿದ್ದು, ಆಹಾರ ಇಲಾಖೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹ ವ್ಯಕ್ತವಾಗಿದೆ.