ಎರಡು ಮಕ್ಕಳಿರುವ ತಂದೆಯಿಂದಲೇ ಅಪ್ರಾಪ್ತೆಯ ಅತ್ಯಾಚಾರ: ಬಾಲಕಿ 8 ತಿಂಗಳ ಗರ್ಭಿಣಿ

ಬೆಳಗಾವಿ: ಇಡೀ ಮಾನವ ಕುಲವೇ ತಲೆ ತಗ್ಗಿಸುವ ಪೈಶಾಚಿಕ ಕೃತ್ಯಕ್ಕೆ ಬೆಳಗಾವಿ ಜಿಲ್ಲೆ ಸಾಕ್ಷಿಯಾಗಿದೆ. ಎರಡು ಮಕ್ಕಳಿರುವ ತಂದೆಯಿಂದಲೇ ಅಪ್ರಾಪ್ತೆ ಗರ್ಭಿಣಿಯಾದ ಘಟನೆ ಬೆಳಗಾವಿಯ ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಸಪ್ಪ ಅಡಿವೆಪ್ಪ ಹಳ್ಳೂರ ಎಂಬಾತನನ್ನು ಬಾಲಕಿಯ ಪೋಷಕರು ನೀಡಿದ ದೂರಿನ ಅಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಪುಸಲಾಯಿಸಿ ಆಕೆಯೊಂದಿಗೆ ನಿಂತರ ದೈಹಿಕ ಸಂಪರ್ಕವನ್ನು ಬಸಪ್ಪ ಬೆಳೆಸಿದ್ದ ಎನ್ನಲಾಗಿದೆ. ನಿರಂತರ ದೈಹಿಕ ಸಂಪರ್ಕದ ಹಿನ್ನೆಲೆ ಬಾಲಕಿ 8 ತಿಂಗಳ ಗರ್ಭಿಣಿಯಾಗಿದ್ದಾಳೆ