ಯೂಟ್ಯೂಬ್‌ನಲ್ಲಿದ್ದ ತೂಕ ಕಡಿಮೆ ಟಿಪ್ಸ್ ಅನುಸರಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ

ಕಣ್ಣೂರು: ಯೂಟ್ಯೂಬ್‌ನಲ್ಲಿದ್ದ ತೂಕ ಕಡಿಮೆ ಟಿಪ್ಸ್ ಅನುಸರಿಸಲು ಹೋಗಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿರುವುದು ವರದಿಯಾಗಿದೆ.
ಕೂತುಪರಂಬದ 18 ವರ್ಷದ ಕಾಲೇಜು ವಿದ್ಯಾರ್ಥಿನಿ ಎಂ. ಶ್ರೀನಂದ ಸಾವನ್ನಪ್ಪಿದ ಯುವತಿ. ಈಕೆ ಮಟ್ಟನ್ನೂರಿನ ಪಳಸ್ಸಿ ರಾಜಾ ಎನ್‌ಎಸ್‌ಎಸ್ ತಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಳು.
ತೂಕ ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರೀನಂದ ಕಳೆದ ಕೆಲ ಸಮಯದಿಂದ ಯೂಟ್ಯೂಬ್‌ನಲ್ಲಿ ವಿಡಿಯೋಸ್ ನೋಡಿಕೊಂಡು, ಅದರಲ್ಲಿ ಬರುತ್ತಿದ್ದ ಡಯಟ್ ಪ್ಲಾನ್ ಅನುಸರಿಸುತ್ತಿದ್ದಳು. ಇದರಿಂದ ಆಕೆ ಊಟ ಮಾಡುವುದನ್ನು ಸಹ ಕಡಿಮೆ ಮಾಡಿದ್ದಳು. ಈ ಕಾರಣದಿಂದ ದಿನಕಳೆದಂತೆ ಇದು ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿತು.