ಕೈಯಲ್ಲಿ ಲಾಂಗ್ ಹಿಡಿದು ಬೈಕ್‌ನಲ್ಲಿ ಪುಂಡಾಟ: ರೌಡಿಶೀಟರ್‌ನ ಬಂಧನ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಪುಂಡಾಟ ಮುಂದುವರಿದಿದೆ. ಕೈಯಲ್ಲಿ ಲಾಂಗ್ ಹಿಡಿದು ಬೈಕ್‌ನಲ್ಲಿ ಪ್ರಯಾಣಿಸಿದ ರೌಡಿಶೀಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರ ಪೊಲೀಸರು, ರೌಡಿಶೀಟರ್ ಸಿದ್ದಿಕಿಯನ್ನು ಬಂಧಿಸಿದ್ದಾರೆ. ಶಿವಾಜಿನಗರದ ಬಂಬೂ ಬಜಾರ್‌ನಲ್ಲಿ ಬೈಕ್ ರೈಡ್ ವೇಳೆ ಲಾಂಗ್ ಹಿಡಿದಿದ್ದ ರೌಡಿಶೀಟರ್ ಸಿದ್ದಿಕಿ ಪ್ರಯಾಣಿಸಿದ್ದ. ಲಾಂಗ್ ಹಿಡಿದುಕೊಂಡಿದ್ದ ವೀಡಿಯೋ ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿತ್ತು.




