ವಿದ್ಯುತ್ ಲೈನ್ ಸರಿ ಪಡಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಲೈನ್‌ಮ್ಯಾನ್ ಸಾವು
ಮಂಡ್ಯ: ವಿದ್ಯುತ್ ಲೈನ್ ಸರಿ ಪಡಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಚೆಸ್ಕಾಂ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರೊಟ್ಟಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ರೊಟ್ಟಿಕಟ್ಟೆ ಗ್ರಾಮದ ಮಳವಳ್ಳಿ-ಕೊಳ್ಳೆಗಾಲ ರಾಷ್ಟ್ರೀಯ ಹೆದ್ದಾರಿ ಬಳಿ ಘಟನೆ ನಡೆದಿದೆ. ಮಹಮ್ಮದ್ ಅರ್ಷದ್ ಅಲಿ(28) ಮೃತ ಲೈನ್‌ಮ್ಯಾನ್.
ಅರ್ಷದ್ ಅಲಿ ವಿದ್ಯುತ್ ಕಂಬಕ್ಕೆ ಹತ್ತಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದಿದ್ದು, ಪರಿಣಾಮ ವಿದ್ಯುತ್ ಕಂಬದ ಮೇಲೆ ಪ್ರಾಣ ಬಿಟ್ಟಿದ್ದಾರೆ. 11ಕೆವಿ ಲೈನ್‌ನಲ್ಲಿ ಓವರ್ ಲೋಡ್‌ನಿಂದ ಪದೇ ಪದೇ ವಿದ್ಯುತ್ ಕಡಿತವಾಗುತ್ತಿತ್ತು. ಅಧಿಕಾರಿಗಳ ಸೂಚನೆಯಂತೆ ಮೂವರು ಲೈನ್‌ಮ್ಯಾನ್‌ಗಳು ಕೆಲಸ ಮಾಡುತ್ತಿದ್ದರು.




