2025-26ನೇ ಸಾಲಿನ ರಾಜ್ಯ ಬಜೆಟ್: ಕರಾವಳಿ, ಮಲೆನಾಡು ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ, ಕಡಲೊರೆತ, ಭೂಕುಸಿತ ತಪ್ಪಿಸಲು 200 ಕೋಟಿ ರೂ. ಅನುದಾನ
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಇಂದು 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ.
ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಮಾಸಿಕ ಆದಾಯ ತಲಾ 2 ಸಾವಿರ ಹೆಚ್ಚಳ, ಶಾಲೆಗಳಲ್ಲಿ ಕೆಲಸ ಮಾಡುವ ಅಡುಗೆ ಸಿಬ್ಬಂದಿಗೆ ಮಾಸಿಕ ಗೌರವದಿಂದ ತಲಾ 1 ಸಾವಿರ ಹೆಚ್ಚಳ.
ಮಧ್ಯಾಹ್ನ ಉಪಹಾರ ಯೋಜನೆಯಡಿ ರಾಜ್ಯದ 16,347 ಶಾಲೆಗಳ ಅಡುಗೆಮನೆ ಆಧುನೀಕರಣ ಕಾರ್ಯ ಮತ್ತು ಹೊಸ ಪಾತ್ರೆ ಪರಿಕರಗಳನ್ನು ಒದಗಿಸಲು ₹46 ಕೋಟಿ . ವೆಚ್ಚ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಅಡಿ ₹200 ಕೋಟಿ ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆ.ಪಿ.ಎಸ್. ಶಾಲೆಗಳನ್ನಾಗಿ ಉನ್ನತೀಕರಣ.
ಕರಾವಳಿ, ಮಲೆನಾಡು ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ, ಕಡಲೊರೆತ ತಪ್ಪಿಸಲು ಕ್ರಮ, ಭೂಕುಸಿತ ತಪ್ಪಿಸಲು ₹200 ಕೋಟಿ ಅನುದಾನ
ಗದಗ ಜಿಲ್ಲೆ ಡಂಬಳದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ, ತೋಟಗಾರಿಕೆ ಅಭಿವೃದ್ಧಿಗೆ ಯೋಜನೆ-2 ಜಾರಿ.
ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರವಾಗಿ ಅನುಗ್ರಹ ಯೋಜನೆ ಜಾರಿ. ಹಸು, ಕರುಗಳ ಸಾವಿನ ಪರಿಹಾರ ಧನ ₹10 ಸಾವಿರ- 15 ಸಾವಿರ ಗೆ ಹೆಚ್ಚಳ, ಕುರಿ,ಮೇಕೆ ಮೃತಪಟ್ಟರೆ ಪರಿಹಾರ ಧನ ₹5 ಸಾವಿರದಿಂದ ₹7.5 ಸಾವಿರಕ್ಕೆ ಹೆಚ್ಚಳ. ಬೆಂಗಳೂರಿನಲ್ಲಿ ಕುರಿ, ಮೇಕೆ, ಮಾರುಕಟ್ಟೆ ಸ್ಥಾಪನೆ.
ರಾಜ್ಯದ ಹೆಮ್ಮೆಯ ದೇಶಿ ದನದ ತಳಿಗಳಾದ ಹಳ್ಳಿಕಾರ್, ಕಿಲಾರಿ, ಅಮೃತ್ ಮಹಲ್ ಹಾಗೂ ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ₹2ಕೋಟಿ ಮೀಸಲು




