2025-26ನೇ ಸಾಲಿನ ರಾಜ್ಯ ಬಜೆಟ್: ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ 1,000, ಸಹಾಯಕಿಯರ ಗೌರವ ಧನ 750 ರೂ.ಹೆಚ್ಚಳ
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಇಂದು 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ₹1,000 ಹಾಗೂ ಸಹಾಯಕಿಯರ ಗೌರವ ಧನ ₹750 ಹೆಚ್ಚಳ.
ಮಹಿಳೆಯರಿಗೆ ರಾಜ್ಯಮಟ್ಟದಲ್ಲಿ ಅಕ್ಕ ಕೋ ಆಪರೇಟಿವ್ ಸೊಸೈಟಿ ಆರಂಭ. ಮಹಿಳೆಯರಿಗಾಗಿ ಸ್ತ್ರೀ ಸಂಘ ನಿರ್ಮಾಣ.
ಮೈಸೂರು, ಕಲಬುರಗಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಗಳ ನಿರ್ಮಾಣ, ಕೊಪ್ಪಳದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣ, ಯಲಬುರ್ಗಾ, ಜೇವರ್ಗಿ, ಯಾದಗಿರಿಯಲ್ಲಿ ನರ್ಸಿಂಗ್ ಕಾಲೇಜು, ಕೋಲಾರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ




