ವಿಟ್ಲ: ಎಸ್ ಡಿ ಪಿ ಐ ವಿಟ್ಲ ಬ್ಲಾಕ್ ಸಮಿತಿ ವತಿಯಿಂದ ಎಂ ಕೆ ಪೈಝಿ ಬಂಧನ ವಿರೋಧಿಸಿ ವಿಟ್ಲ ಜಂಕ್ಷನ್ ನಲ್ಲಿ ಪ್ರತಿಭಟನೆ
ವಿಟ್ಲ: ಎಸ್ ಡಿ ಪಿ ಐ ವಿಟ್ಲ ಬ್ಲಾಕ್ ಸಮಿತಿ ವತಿಯಿಂದ ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ ಕೆ ಪೈಝಿ ಬಂಧನ ವಿರೋಧಿಸಿ ವಿಟ್ಲ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾ ಕಾರ್ಯದರ್ಶಿ ಶಾಕೀರ್ ಅಳಕೆಮಜಲು ಮಾತನಾಡಿ ಸರಕಾರದ ವಿರುದ್ಧ ಹೋರಾಟ ನಡೆಸುವ ನಾಯಕರನ್ನು ಬಂಧಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕಾರ್ಯವನ್ನು ಸರಕಾರ ಮಾಡುತ್ತಿದೆ ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ ಪುತ್ತೂರು ಕ್ಷೇತ್ರ ಸಮಿತಿ ಕೊಶಧಿಕಾರಿ ಮುಸ್ತಫ ಡಿಬಿ ಒಕ್ಕೆತ್ತೂರ್, ಕೊಳ್ನಾಡು ಬ್ಲಾಕ್ ಅಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, ಕಬಕ ಬ್ಲಾಕ್ ಅಧ್ಯಕ್ಷ ಸಿದ್ದೀಕ್ ಉರಿಮಜಲ್, ವಿಟ್ಲ ಬ್ಲಾಕ್ ಸಮಿತಿ ಸದಸ್ಯ ಶಾಫಿ ಪುಣಚ, ವಿಟ್ಲ ಪಟ್ಟಣ ಸಮಿತಿ ಅಧ್ಯಕ್ಷ ರಫೀಕ್ ಪೊನ್ನೋಟು, ಪಂಚಾಯತ್ ಸದಸ್ಯರುಗಳಾದ ಸಿದ್ದೀಕ್ ಕಂಬಳಬೆಟ್ಟು, ಮೊಹಮೂದ್ ಕಡಂಬು ಭಾಗವಹಿಸಿದ್ದರು. ವಿಟ್ಲ ಬ್ಲಾಕ್ ಸಮಿತಿ ಕಾರ್ಯದರ್ಶಿ ರಹೀಮ್ ಕಂಬಳಬೆಟ್ಟು ಸ್ವಾಗತಿಸಿ, ವಂದಿಸಿದರು.




