ವಿಟ್ಲ: ಕಲ್ಲಿನ ಕೋರೆ ಅಟ್ಟಹಾಸ: ಒಟ್ಟು 21 ಮನೆಗಳಿಗೆ ಹಾನಿ: ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ವರದಿ
ವಿಟ್ಲ: ಮಾಡತ್ತಡ್ಕದ ಕ್ವಾರಿಯಲ್ಲಿ ಕಲ್ಲು ಒಡೆಯುವುದಕ್ಕಾಗಿ ತಂದಿರುವ ಸ್ಪೋಟಕಗಳು ಬಿಸಿಲಿನ ತೀವ್ರತೆಗೆ ಏಕಾಏಕಿ ಸ್ಪೋಟವಾಗಿ ಮನೆಗಳಿಗಾದ ಹಾನಿಯ ಬಗ್ಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ವರದಿಯನ್ನು ಸಿದ್ದಪಡಿಸಿದೆ. ಕೇಂದ್ರದ ಪಿಇಎಸ್‌ಒ ತಂಡದ ಸ್ಥಳಕ್ಕಾಗಮಿಸಿ ಮಾದರಿ ಸಂಗ್ರಹಿಸುವ ಕಾರ್ಯವನ್ನು ಗುರುವಾರ ಮಾಡಿದೆ.
ಸ್ಫೋಟ ದಿಂದ ಒಟ್ಟು 21 ಮನೆಗಳಿಗೆ ಹಾನಿಯಾಗಿದ್ದು, 2 ಮನೆ ಸಂಪೂರ್ಣ ಹಾನಿಯಾದರೆ, 8 ಸಾಧಾರಣ ಹಾಗೂ 11 ಮನೆಗಳಿಗೆ ಚಿಕ್ಕಮಟ್ಟದಲ್ಲಿ ಹಾನಿಯಾಗಿರುವ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ.
ಸ್ಪೋಟದಿಂದ ಎರಡು ಮನೆಗಳಿಗೆ ತೀವ್ರವಾದ ಹಾನಿಯಾಗಿದೆ. ಮೂರು ಮನೆಗಳಿಗೆ ಸಾಧಾರಣ ಹಾನಿಯಾಗಿರುವ ಮತ್ತು ಉಳಿದ ೧೩ ಮನೆಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ವರದಿಯಲ್ಲಿ ಹೇಳಿದ್ದಾರೆ.
ಸ್ಪೋಟದ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿರುವ ಬೆನ್ನಿನಲ್ಲಿ ಎಕ್ಸ್ ಪ್ಲೋಸಿವ್ಸ್ ಸೇಪ್ಟಿ ತಂಡ ಸ್ಥಳಕ್ಕಾಗಮಿಸಿ ಸ್ಪೋಟಕಗಳ ಕುರುಹುಗಳನ್ನು ಸಂಗ್ರಹಿಸುವ ಜತೆಗೆ ಸ್ಥಳದಿಂದ ಮಾದರಿಗಳನ್ನು ಪಡೆದುಕೊಂಡು ತೆರಳಿದ್ದಾರೆ. ವಿಟ್ಲ ಹೋಬಳಿ ಉಪತಹಸೀಲ್ದಾರ್ ನವೀನ್ ಕುಮಾರ್, ಕಂದಾಯ ನಿರೀಕ್ಷಕ ರವಿ ಎಂ. ಎಸ್. ಹಾಜರಿದ್ದರು.




