ಇನ್ನೊವಾ ಕಾರ್‌ಗೆ ಬೈಕ್ ಢಿಕ್ಕಿ: ಒಂದೇ ಕುಟುಂಬದ ನಾಲ್ಕು ಮಂದಿ ಸ್ಥಳದಲ್ಲೇ ಸಾವು, ನಾಲ್ವರ ಸ್ಥಿತಿ ಗಂಭೀರ
ಕೋಲಾರ: ರಸ್ತೆ ಅಪಘಾತದಿಂದ ಒಂದೇ ಕುಟುಂಬದ ಎರಡು ಕಂದಮ್ಮಗಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಾಲ್ವರ ಸ್ಥಿತಿ ಗಂಭಿರವಾಗಿದೆ.
ಒಂದೇ ಕುಟುಂಬದ ನಾಲ್ವರ ದಾರುಣ ಅಂತ್ಯ
ಇನ್ನೊವಾ ಕಾರ್‌ಗೆ ಬೈಕ್ ಡಿಕ್ಕಿಯಾದ ಹಿನ್ನೆಲೆ ಒಂದೇ ಕುಟುಂಬದ ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ ನಾಲ್ಕು ಜನರು ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಕ್ ಸವಾರ ದೊಡ್ಡೂರು ಗ್ರಾಮದ ಶ್ರೀನಾಥ್ ಎನ್ನಲಾಗಿದೆ. ಎಂಟು ತಿಂಗಳ ತುಂಬು ಗರ್ಭಿಣಿ ಸುಷ್ಮಿತಾ ಹೊಟ್ಟೆಯಲ್ಲಿದ್ದ ಮಗು ಸಹ ಸಾವನ್ನಪ್ಪಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕಮ್ಮಸಂದ್ರ ಸಂತೋಷ್ ಕುಟುಂಬ ಆಸ್ಪತ್ರೆಯಲ್ಲಿದ್ದ ಸಂಬಂಧಿಯನ್ನ ಮಾತನಾಡಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕುಪ್ಪನಹಳ್ಳಿ ಬಳಿ ಮಧ್ಯೆ ರಾತ್ರಿ ಭೀಕರ ಅಪಘಾತ ಸಂಭವಿಸಿದೆ.
ಇನ್ನೋವಾ ಕಾರಿನಲ್ಲಿದ್ದ ಸಂತೋಷ್ ಮಾವ ಮಹೇಶ (55), ಮಗಳು ಉದ್ವಿತ (3), ತಾಯಿ ರತ್ನಮ್ಮ (60) ಹಾಗೂ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಸದ್ಯ ಸಂತೋಷ್ ಪತ್ನಿ ಸುಶ್ಮಿತಾ ಹಾಗೂ ಮಗ ವಿರಾಟ್, ಅತ್ತೆ ಸುಜಾತ ಹಾಗೂ ಇನ್ನೋವಾ ಕಾರ್ ಚಾಲಕ ಅರುಣ್ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಭೀಕರ ಅಪಘಾತದಿಂದ ದಿಕ್ಕೆ ತೋಚದಂತ್ತಾಗಿರುವ ಕುಟುಂಬ ಆಘಾತಕ್ಕೆ ಒಳಗಾಗಿದೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.




