March 15, 2025

ಇಸ್ರೇಲ್‌ಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಕೇರಳದ ವ್ಯಕ್ತಿಯ ಗುಂಡಿಕ್ಕಿ ಹತ್ಯೆ

0

ಮಂಗಳೂರು: ಇಸ್ರೇಲ್‌ಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಕೇರಳದ ವ್ಯಕ್ತಿಯೊಬ್ಬರನ್ನು ಜೋರ್ಡಾನ್ ಸೈನಿಕರು ಗುಂಡಿಕ್ಕಿ ಹತ್ಯೆಗೈದಿರುವ ಬಗ್ಗೆ ವರದಿಯಾಗಿದೆ.

ಕೇರಳದ ಥುಂಬಾ ನಿವಾಸಿ ಥಾಮಸ್ ಗೇಬ್ರಿಯಲ್ ಪೆರೆರಾ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಘಟನೆ ಫೆಬ್ರವರಿ 10 ರಂದು ನಡೆದಿರುವುದಾಗಿ ವರದಿಯಾಗಿದೆ.

ಜೋರ್ಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಇದೊಂದು ದುಃಖಕರ ಸಂಗತಿ ಎಂದಿರುವ ರಾಯಭಾರ ಕಚೇರಿಯು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಮೃತದೇಹದ ಸಾಗಣೆಗೆ ಜೋರ್ಡಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

 

 

Leave a Reply

Your email address will not be published. Required fields are marked *

You may have missed

error: Content is protected !!