March 5, 2026

ಯುಪಿ ಮೂಲದ ವ್ಯಕ್ತಿ ಮಂಗಳೂರಿನ ಲಾಡ್ಜ್ ನಲ್ಲಿ ಆತ್ಮಹತ್ಯೆ

0
image_editor_output_image1945546494-1740994004059.jpg

ಮಂಗಳೂರು: ಚೆನೈನಲ್ಲಿ ಖಾಸಗಿ ಕಂಪನಿಯ ಉದ್ಯೋಗಿ ಅಭಿಷೇಕ್ ಸಿಂಗ್ ಎಂಬ ಯುಪಿ ಮೂಲದ ವ್ಯಕ್ತಿ ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಂಗಳೂರಿನಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಇವರು ರಾವ್ ಅ್ಯಂಡ್ ರಾವ್ ರಸ್ತೆಯ ಲಾಡ್ಜ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮೊದಲು ವೀಡಿಯೋ ಮಾಡಿ ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಸಿಐಎಸ್‌ ಎಫ್ ನ ಮಹಿಳಾ ಅಧಿಕಾರಿಯೊಬ್ಬಳು ತನಗೆ ವಂಚಿಸಿದ್ದಾಗಿ ಅಭಿಷೇಕ್ ಸಿಂಗ್ ಹೇಳಿಕೊಂಡಿದ್ದಾರೆ. ಮಹಿಳೆಗೆ ಮದುವೆಯಾಗಿತ್ತಾದ್ರೂ ಅದನ್ನು ಮುಚ್ಚಿಟ್ಟುಕೊಂಡು ನನ್ನ ಜೊತೆ ಸಲುಗೆ ಬೆಳೆಸಿದ್ದಳು ಹಾಗೂ ಅದೇ ಸಲುಗೆಯಲ್ಲಿ ನನ್ನಿಂದ ಲಕ್ಷಾಂತರ ರೂಪಾಯಿ ಹಣ ಚಿನ್ನಾಭರಣ ಪೀಕಿಸಿಕೊಂಡಿದ್ದಾಳೆ.

Leave a Reply

Your email address will not be published. Required fields are marked *

error: Content is protected !!