February 1, 2026

ಮಡಿಕೇರಿ: ಕಾಫಿ ತೋಟದಲ್ಲಿ ಹೆಜ್ಜೇನು ದಾಳಿಗೆ ವ್ಯಕ್ತಿ ಸಾವು

0
image_editor_output_image574012031-1740772269221.jpg

ಮಡಿಕೇರಿ: ಕಾಫಿ ಕೊಯ್ದು ಸಂದರ್ಭ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ಪೂದ್ದುಮಾನಿ ಗ್ರಾಮದಲ್ಲಿ ನಡೆದಿದೆ.

ಎಚ್.ಸಿ. ಲೋಹಿತ್ (32) ಮೃತಪಟ್ಟ ಕಾರ್ಮಿಕ. ಲೋಹಿತ್ ಸೋಮವಾರದಿಂದ ನಾಪತ್ತೆಯಾಗಿದ್ದು, ಆತನನ್ನು ಹುಡುಕಾಡುತ್ತಿದ್ದಾಗ ಮಂಗಳವಾರ ಕಾಫಿ ತೋಟದಲ್ಲಿ ಮೃತ ದೇಹ ಪತ್ತೆಯಾಗಿದೆ.

ಘಟನೆ ಕುರಿತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!