March 20, 2026

ಕಾರು ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವು

0
image_editor_output_image-1262104545-1740689246898.jpg

ಹುಣಸೂರು: ಬೈಕ್‌ ಸವಾರನಿಗೆ ಕಾರೊಂದು ಢಿಕ್ಕಿ ಹೊಡೆದ ರಭಸಕ್ಕೆ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಣಸೂರು-ನಾಗರಹೊಳೆ ಮುಖ್ಯರಸ್ತೆಯ ಹಳೇಪೆಂಜಳ್ಳಿ ಗೇಟ್‌ ಬಳಿ ನಡೆದಿದ್ದರೆ, ಘಟನೆ ವೀಕ್ಷಿಸುತ್ತಿದ್ದವನ ಮೇಲೆ ಮತ್ತೂಂದು ಕಾರು ಢಿಕ್ಕಿ ಹೊಡೆದು ತೀವ್ರಗಾಯಗೊಂಡಿದ್ದಾನೆ.

ಹನಗೋಡು ಹೋಬಳಿಯ ಹರಳಹಳ್ಳಿಯ ಮಾದೇಗೌಡರ ಪುತ್ರ ಸ್ವಾಮಿಗೌಡ (50) ಮೃತಪಟ್ಟವರು.

ಹುಣಸೂರಿನಲ್ಲಿ ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹಳೇಪೆಂಜಹಳ್ಳಿ ಗೇಟ್‌ ಬಳಿ ಎದುರಿನಿಂದ ಎರಡು ಕಾರುಗಳು ಒಂದನ್ನೊಂದು ಹಿಂದಿಕ್ಕುವ ಭರದಲ್ಲಿ ಕಾರು ಅತೀ ವೇಗವಾಗಿ ಬಂದು ಢಿಕ್ಕಿ ಹೊಡೆದ ರಭಸಕ್ಕೆ ಸ್ವಾಮಿಗೌಡರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!