ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ: ಜಿಮ್ ತರಬೇತುದಾರ ಸಾವು
ಬೆಂಗಳೂರು: ಸ್ನೇಹಿತನನ್ನು ಮಾತಡಿಸಿಕೊಂಡು ರಾಯಲ್ ಎನ್ ಫೀಲ್ಡ್ ಬುಲೆಟ್ ನಲ್ಲಿ ಮನೆಗೆ ಬರುತ್ತಿದ್ದ ಜಿಮ್ ತರಬೇತು ದಾರನೊಬ್ಬ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡು ಮೃತ ಪಟ್ಟಿರುವ ಘಟನೆ ಮಂಗಳವಾರ ತಡರಾತ್ರಿ ಯಶವಂತ ಪುರದ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮತ್ತಿಕೆರೆ ಸಮೀಪದ ಡಿ.ಕೆ. ನಗರ ನಿವಾಸಿ ಅರುಣ್(30) ಮೃತ ದುರ್ದೈವಿ. ಮತ್ತಿಕೆರೆಯ ಜೆ.ಪಿ.ಪಾರ್ಕ್ ಸಮೀಪದಲ್ಲಿ ಮಂಗಳವಾರ ತಡರಾತ್ರಿ 1 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ. ಯಲಹಂಕದಲ್ಲಿರುವ ಜಿಮ್‌ವೊಂದರ ತರಬೇತುದಾರನಾಗಿರುವ ಅರುಣ್, ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ.
ಬಳಿಕ ಸ್ನೇಹಿತ ರೊಬ್ಬರನ್ನು ಮಾತಡಿಸಿಕೊಂಡು ಬರುವುದಾಗಿ ಹೇಳಿ, ಮತ್ತೆ ಬುಲೆ ಟ್‌ನಲ್ಲಿ ಮನೆಯಿಂದ ಹೊರ ಟಿದ್ದಾರೆ. ಸ್ನೇಹಿತರ ಭೇಟಿ ಬಳಿಕ ತಡರಾತ್ರಿ 1 ಗಂಟೆ ಸುಮಾ ರಿಗೆ ವಾಪಸ್ ಬರುವಾಗ ನಿಯಂತ್ರಣ ತಪ್ಪಿ ಜೆ.ಪಿ.ಪಾರ್ಕ್ ಸಮೀಪದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡು, ಕೆಳಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದೆ. ಬಳಿಕ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಬುಲೆಟ್ ಚಾಲನೆ ವೇಳೆ ಅರುಣ್ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಹೇಳಲಾಗಿದೆ.





