December 15, 2025

ಬಂಟ್ವಾಳ: ಲಕ್ಷಾಂತರ ರೂ. ಖೋಟಾ ನೋಟು ಚಲಾವಣೆ: ಆರೋಪಿ ಪೊಲೀಸ್ ವಶಕ್ಕೆ

0
image_editor_output_image662016196-1740650402511.jpg

ಬಂಟ್ವಾಳ: ಲಕ್ಷಾಂತರ ರೂ ಖೋಟಾ ನೋಟು ಚಲಾವಣೆ ಆರೋಪದಡಿ ಆರೋಪಿಯನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

2024 ರಲ್ಲಿ ಬಿ.ಸಿ.ರೋಡಿನ ಪೇಟೆಯ ಅಂಗಡಿಗಳಲ್ಲಿ ಖೋಟಾ ನೋಟನ್ನು ಚಲಾವಣೆಗೆ ತಂದು ಪೊಲೀಸರ ಕೈಗೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದರೆ ಓರ್ವ ಆರೋಪಿ ಪರಾರಿಯಾಗಿದ್ದ.

ಕೇರಳ ನಿವಾಸಿಗಳಾದ ಮಹಮ್ಮದ್ ಸಿ.ಎ. ಮತ್ತು ಖಮರುನ್ನೀಶ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದರು. ಆದರೆ ತಲೆಮರೆಸಿಕೊಂಡಿದ್ದ ಇನ್ನೋರ್ವ ಪ್ರಮುಖ ಆರೋಪಿಯಾಗಿದ್ದ ಕೇರಳ ಚೆಂಗಳ ನಿವಾಸಿ ಶರೀಫ್ ಪಿ.ಎ. ಎಂಬಾತನನ್ನು ಇದೀಗ ಬಂಟ್ವಾಳ ಪೊಲೀಸರ ತಂಡ ಕಾಸರಗೋಡಿನ ವಿದ್ಯಾನಗರದಲ್ಲಿ ಬಂಧಿಸಿದೆ.

ಇವರ ತಂಡ ಕಾರಿನಲ್ಲಿ ಬಂದು ಅಂಗಡಿಗಳಲ್ಲಿ 500 ಮುಖ ಬೆಲೆಯ ಖೋಟಾ ನೋಟುಗಳನ್ನು ಬಹಳ ನಾಜೂಕಾಗಿ ಚಲಾವಣೆ ಮಾಡುತ್ತಿದ್ದರು. 10 ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಅಂದರೆ 100 ರೂಪಾಯಿಗಿಂತ ಕಡಿಮೆ ಬೆಲೆಯ ಸಾಮಾಗ್ರಿಗಳನ್ನು ಪಡೆದು ಚಿಲ್ಲರೆ ಹಣವನ್ನು ಪಡೆದು ನಕಲಿ ಹಣವನ್ನು ಅಸಲಿಯಾಗಿ ಪರಿವರ್ತನೆ ಮಾಡಿ ಹೊರಟು ಹೋಗುತ್ತಿದ್ದರು.

ಆದರೆ ಇವರ ಅಸಲಿ ಕಥೆಯ ಬಗ್ಗೆ ಅಂಗಡಿಯ ಮಾಲಕರುಗಳಿಗೆ ಸಂಶಯ ಬಂದು ಪೋಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ.ರಾಮಕೃಷ್ಣ ಅವರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!