December 15, 2025

ಅಂತಾರಾಷ್ಟ್ರೀಯ ಖ್ಯಾತಿಯ ಹಂಪಿ ಉತ್ಸವಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಡಾ. ಅನುರಾಧಾ ಕುರುಂಜಿ ಆಯ್ಕೆ: ಮಹಿಳಾ ವಿಚಾರ ಗೋಷ್ಠಿಯಲ್ಲಿ ಪ್ರಬಂಧ ಮಂಡನೆ

0
IMG-20250225-WA0024.jpg

ಸುಳ್ಯ: ಅಂತಾರಾಷ್ಟ್ರೀಯ ಖ್ಯಾತಿಯ ಜಗದ್ವಿಖ್ಯಾತ ಹಂಪಿ ಉತ್ಸವದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಲೇಖಕರೂ, ವ್ಯಕ್ತಿತ್ವವಿಕಸನ ತರಬೇತುದಾರರೂ ಆದ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ.

ಹಿಂದಿನ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರು ಸೃಷ್ಟಿಸುವ ಸಲುವಾಗಿ ರಾಜ್ಯ ಸರ್ಕಾರವು ಆರಂಭಿಸಿರುವ ಹಂಪಿ ಉತ್ಸವಕ್ಕೆ ದೇಶ ವಿದೇಶಗಳಿಂದ ಸಾಗರೋಪಾದಿಯಲ್ಲಿ ಜನರು ಆಗಮಿಸಿ ಸಾಕ್ಷಿಯಾಗುತ್ತಿದ್ದು, 2025ರ ಹಂಪಿ ಉತ್ಸವವು ಫೆಬ್ರುವರಿ 28 ರಿಂದ ಮಾರ್ಚ್ 2 ರವರೆಗೆ ಐತಿಹಾಸಿಕ ಪ್ರವಾಸಿ ತಾಣ ಹಂಪಿಯಲ್ಲಿ ನಡೆಯಲಿದೆ.

ಉತ್ಸವದ ಪ್ರಯುಕ್ತ ಹಲವು ವಿಚಾರಗಳಲ್ಲಿ ಗೋಷ್ಠಿಗಳು ನಡೆಯಲಿದ್ದು, ಮಹಿಳಾ ವಿಚಾರ ಗೋಷ್ಠಿಯಲ್ಲಿ ಡಾ. ಅನುರಾಧಾ ಕುರುಂಜಿಯವರು “ವಿಜಯನಗರ ಕಾಲದ ಮಹಿಳೆ ಮತ್ತು ಮನೋರಂಜನಾ ಕ್ರೀಡೆಗಳು” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ಈ ಹಿಂದೆ ಹಂಪಿ ಉತ್ಸವದ ಕವಿಗೋಷ್ಠಿಯಲ್ಲೂ ಭಾಗವಹಿಸಿರುವ ಇವರು ಈಗಾಗಲೇ 20ಕ್ಕೂ ಅಧಿಕ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ಕುರುಂಜಿ ಪದ್ಮಯಗೌಡ ಮತ್ತು ಸೀತಮ್ಮ ದಂಪತಿಗಳ ಪುತ್ರಿ, ಕೆವಿಜಿ ಪಾಲಿಟೆಕ್ನಿಕ್ ನ ಶಿಕ್ಷಕ ಚಂದ್ರಶೇಖರ ಬಿಳಿನೆಲೆಯವರ ಪತ್ನಿ.

Leave a Reply

Your email address will not be published. Required fields are marked *

error: Content is protected !!