ಮಂಗಳೂರು ಜೈಲಿಗೆ ಹೊರಗಡೆ ರಸ್ತೆಯಿಂದ ಪ್ಯಾಕೆಟ್ ಎಸೆತ: ಕಾರಿನ ಕ್ಯಾಮರಾದಲ್ಲಿ ದೃಶ್ಯ ಸೆರೆ
ಮಂಗಳೂರು: ಮಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಹೊರಗಡೆ ರಸ್ತೆಯಿಂದ ಇಬ್ಬರು ಯುವಕರು ದೊಡ್ಡ ಗಾತ್ರದ ಪ್ಯಾಕೆಟ್ ನ್ನು ಎಸೆದು ಹೋದ ಘಟನೆ ನಡೆದಿದ್ದು, ಮಾಜಿ ಮೇಯರ್ ಕವಿತಾ ಸನಿಲ್ ಅವರ ಕಾರಿನ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಮಂಗಳೂರು ಕಾರಾಗೃಹಕ್ಕೆ ಹೊರಗಡೆಯಿಂದ ಇದೀಗ ಪೊಟ್ಟಣಗಳನ್ನು ಎಸೆಯುತ್ತಿರುವ ಪ್ರಕರಣ ಹೆಚ್ಚಾಗಿದೆ. ಈ ಮೊದಲು ಇದೇ ರೀತಿ ಪ್ರಕರಣಗಳು ನಡೆದಿದ್ದವು , ಇದೀಗ ಮತ್ತೆ ನಡೆದಿದೆ.
ಆದರೆ ಈ ಬಾರಿ ಮಾಜಿ ಮೇಯರ್ ಕವಿತಾ ಸನಿಲ್ ಅವರು ಜೈಲ್ ರಸ್ತೆಯಲ್ಲಿ ಕಾರಿನಲ್ಲಿ ಸಾಗುವಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಪೊಟ್ಟಣವೊಂದನ್ನು ಜೈಲಿನ ಒಳಗೆ ಎಸೆದಿದ್ದನ್ನು ನೋಡಿದ್ದರು. ಅಲ್ಲದೆ ಅವರ ಕಾರಿನಲ್ಲಿರುವ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದೀಗ ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ದೊಡ್ಡ ಗಾತ್ರದ ಪೊಟ್ಟಣವನ್ನು ಭಾನುವಾರ ಎಸೆದು ಹೋದ ಕುರಿತು ಕಾರಾಗೃಹದ ಮೇಲ್ವಿಚಾರಕರು ದೂರು ನೀಡಿದ್ದು, ಬರ್ಕೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.




