ಸಾಣೂರಿನಲ್ಲಿ ಮಣ್ಣು ತುಂಬಿದ್ದ ಟಿಪ್ಪರ್ ಪಲ್ಟಿ

ಕಾರ್ಕಳ : ಟಿಪ್ಪರ್ ಪಲ್ಟಿಯಾಗಿ ಚಾಲಕ ಅಪಾಯದಿಂದ ಪಾರಾದ ಘಟನೆ ಫೆ. 24 ರಂದು ಸಾಣೂರಿನಲ್ಲಿ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 169 ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರತಂಗಡಿ ಪರಿಸರದಲ್ಲಿ ಸಾಣೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಎದುರುಗಡೆ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆಯಲ್ಲಿ ಮಣ್ಣನ್ನು ತುಂಬಿಸಿಕೊಂಡು ಮುಖ್ಯರಸ್ತೆ ಕಡೆಗೆ ಬರುತ್ತಿದ್ದ ಟಿಪ್ಪರ್ ಆಯತಪ್ಪಿ ಧರಾಶಾಯಿಯಾಗಿದೆ.
ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಯಿಂದ ಸರ್ವಿಸ್ ರಸ್ತೆಯ ಅಂಚಿನಲ್ಲಿ ಮಳೆ ನೀರು ಹೋಗಲು ನಿರ್ಮಾಣಗೊಂಡ ಕಾಂಕ್ರೀಟ್ ಮೋರಿಯ ಮೇಲೆ ಟಿಪ್ಪರ್ ಹತ್ತಿ ಬಂದದ್ದೇ ಈ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ. ಕಾಂಕ್ರೀಟ್ ಮೇರಿಯ ಮೇಲೆ ಬೇಜವಾಬ್ದಾರಿಯಿಂದ ಟಿಪ್ಪರ್ ಚಲಾಯಿಸಿದ ಚಾಲಕನನ್ನು ಡಿಬಿಎಲ್ ಕನ್ಸೆಕ್ಷನ್ ಮ್ಯಾನೇಜರ್ ಬಾಲಾಜಿ ಅವರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.