March 20, 2026

ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ವತಿಯಿಂದ ಮಾಹಿತಿ ಶಿಬಿರ

0
image_editor_output_image1202409622-1740209727852.jpg

ವಿಟ್ಲ; ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್ ಕಮಿಟಿ ವತಿಯಿಂದ ವಕಪ್ ಮತ್ತು ಅಲ್ಪಸಂಖ್ಯಾತ ಇಲಾಖೆ ಸೌಲಭ್ಯಗಳ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ಲಯನ್ಸ್ ಸೇವಾ ಮಂದಿರ ಬಿ ಸಿ ರೋಡು ಇಲ್ಲಿ ನಡೆಯಿತು. ಕೆ. ಪಿ. ಮೊಹಮ್ಮದ್ ಹತಿಫ್ ದಾರಿಮಿ ಖತೀಬರು ಗುಡ್ಡೆ ಅಂಗಡಿ ದುವಾ ನೆರವೇರಿಸಿದರು.

ಜ. ಮುಜೀಬುಲ್ಲಾ ಜಫಾರಿ ಕೆ.ಎ.ಎಸ್ (ನಿ) ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅಲ್ಪಸಂಖ್ಯಾತ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ವಿವರ ನೀಡಿದರು.

ಜಿಲ್ಲಾ ವಕಫ್ ಅಧಿಕಾರಿ ಅಬೂಬಕರ್ ವಕ್ಪ್ ಬೋರ್ಡ್ ನಿಂದ ಸಿಗುವ ಸವಲತ್ತು ಮತ್ತು ಅಕ್ಕ ಬೋರ್ಡಿನಲ್ಲಿ ನೋಂದಾಯಿತವಾದ ಸಂಸ್ಥೆಗಳ ನಿರ್ವಹಣೆ, ಆಡಳಿತದ ಬಗ್ಗೆ ಮಾಹಿತಿ ನೀಡಿದರು. ನೆರೆದಿರುವ ಸಭಿಕರ ಪ್ರಶ್ನೆಗಳಿಗೆ ವಿವರವಾದ ಉತ್ತರವನ್ನು ನೀಡಿದರು. ಮಂಗಳೂರಿನ ಮೂತ್ರಪಿಂಡ ಶಸ್ತ್ರ ಚಿಕಿತ್ಸಾ ತಜ್ಞರು ಡಾ. ಮೊಯ್ದಿನ್ ನಫ್ಸಿರ್ ಭಾಗವಹಿಸಿ ಕಿಡ್ನಿ ಡಯಾಲಿಸಿಸ್ ರೋಗಿಗಳಿಗೆ ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕಿಡ್ನಿ ಡಯಾಲಿಸಿಸ್ ಬಡ ರೋಗಿಗಳಿಗೆ ಸಂಸ್ಥೆಯ ವತಿಯಿಂದ ಕೊಡುವ ಸಹಾಯಧನಕ್ಕಾಗಿ ತಾಲೂಕಿನ ಎಲ್ಲ ಜಮಾಅತ್ ನವರು ಸಹಕರಿಸುವಂತೆ ವಿನಂತಿ ಮಾಡಿದರು
.ಎಂ.ಎಸ್ ಮಹಮ್ಮದ್ ಸ್ವಾಗತಿಸಿದರು,

ಜಮಿಯತುಲ್ ಫಲಾಹ ಜಿಲ್ಲಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್ ಕಾರ್ಯಕ್ರಮ ಉದ್ಘಾಟಿಸಿದರು, ರಝಾಕ್ ಮಾಸ್ಟರ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು, ಅಬೂಬಕ್ಕರ್ ವಕೀಲರು ಮತ್ತು ನೋಟರಿ ವಿಟ್ಲ ಧನ್ಯವಾದ ನೀಡಿದರು. ಮೊಹಮ್ಮದ್ ಕಳವಾರ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!