March 22, 2026

ಹಾವೇರಿ: ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಯರ ಜೊತೆ ಅಸಭ್ಯ ವರ್ತನೆ:
ಠಾಣಾ ಸಿಪಿಐ ಅಮಾನತು

0
n34277308016399101888262b941e8ca92ce4a203fcece3d80340c269d461b4036a7406256cf3052119d694.jpg

ಹಾವೇರಿ: ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಯರ ಜೊತೆ ಸಿಪಿಐ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಮಹಿಳಾ ಠಾಣೆ ಸಿಪಿಐ ಚಿದಾನಂದನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ದೂರು ನೀಡಲು ಬಂದಿದ್ದ ಮಹಿಳೆಯರ ಮೊಬೈಲ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದುದಾಗಿ ಸಿಪಿಐ ಚಿದಾನಂದ ವಿರುದ್ಧ ಆರೋಪ ಕೇಳಿಬಂದಿತ್ತು.

ಅಲ್ಲದೇ ಸಿಪಿಐ ವರ್ತನೆ ವಿರುದ್ಧ ಐವರು ಮಹಿಳೆಯರು ಎಸ್ ಪಿ, ಪೂರ್ವ ವಲಯ ಐಜಿಪಿ ರವಿ ಎಸ್ ಅವರಿಗೆ ದೂರು ನೀಡಿದ್ದರು.

ಸಿಪಿಐ ಚಿದಾನಂದ ವಿಡಿಯೋ ಕಾಲ್ ಕೂಡ ವೈರಲ್ ಆಗಿತ್ತು. ಪ್ರಕರಣ ಸಂಬಂಧ ಐಜಿಪಿ ರವಿ ಎಸ್ ನೇತೃತ್ವದ ತಂಡ ತನಿಖೆ ನಡೆಸಿದ್ದು, ಇದೀಗ ಹಾವೇರಿ ಮಹಿಳಾ ಠಾಣೆ ಸಿಪಿಐ ಚಿದಾನಂದ ನನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದಿಬಂದಿದೆ.

Leave a Reply

Your email address will not be published. Required fields are marked *

error: Content is protected !!