March 15, 2026

ಮಂಜೇಶ್ವರ: ಗೋವಿಂದ ಪೈ ಕಾಲೇಜು ಭಾಷಂತರಕಾರರ ನಾಲ್ಕನೇ ಸಮಾವೇಶಕ್ಕೆ ಚಾಲನೆ

0
image_editor_output_image-2097406291-1739785859662.jpg

ಮಂಜೇಶ್ವರ:ಗೋವಿಂದ ಪೈ ಕಾಲೇಜಿನಲ್ಲಿ ಭಾಷಾಂತರ ಅಧ್ಯಯನ ವಿಭಾಗ ಹಂಪಿ ವಿಶ್ವವಿದ್ಯಾನಿಲಯ ಹಾಗೂ ಗೋವಿಂದ ಪೈ ಕಾಲೇಜಿನ ಕನ್ನಡ ವಿಭಾಗ ಇದರ ಜಂಟಿ ಆಶ್ರಯದಲ್ಲಿ ಗೋವಿಂದ ಪೈ ಕಾಲೇಜಿನಲ್ಲಿ ಬಾಷಂತರಕಾರರ ನಾಲ್ಕನೇ ಸಮಾವೇಶದಕ್ಕೆ ಚಾಲನೆಯಾಗಿದೆ.ಸಮಾವೇಶದ ಪ್ರಯುಕ್ತ ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುಲಪತಿಗಳಾದ ಡಾ: ಡಿ.ವಿ. ಪರಮಶಿವ ಮೂರ್ತಿ ನಿರ್ವಹಿಸಿದರು. ಕಾಲೇಜು ಪ್ರಾಚಾರ್ಯರಾದ ಡಾ ಮುಹಮ್ಮದಾಲಿ ಅಧ್ಯಕ್ಷತೆ ವಹಿಸಿದರು.ಕಾರ್ಯಕ್ರಮದಲ್ಲಿ ಸುಭಾಷ್ ಪಟ್ಟಾಜೆ, ವಿಶ್ವನಾಥ ನಾಗಠಾಣ, ಮೋಹನ್ ಕುಂಠಾರು, ಎಸ್ ಡಿ ಎಂ ಕಾಲೇಜು ಉಜಿರೆ ಸಹ ಪ್ರಾಧ್ಯಾಪಕರಾದ ಡಾ ರಾಜಶೇಖರ ಹಳೆಮನೆ, ಡಾ ಅರುಣ್ ಕುಮಾರ್ ಎಸ್ ಆರ್ ಉಡುಪಿ, ವಿಕಾಸ್ ಹೊಸಮನಿ ತಾರನಾಥ ವರ್ಕಾಡಿ, ಸವಿತ, ಗೋವಿಂದ ಪೈ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಶಂಕರ್, ಡಾ ಸುಜಿತ್ ಎಸ್, ಜಯಂತಿ ಕೆ, ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಂಪಿ ವಿಶ್ವವಿದ್ಯಾನಿಲಯ ಕುಲಪತಿಗಳಾದ ಡಾ ಡಿ.ವಿ ಶಿವಮೂರ್ತಿಯವರು ಮಾತನಾಡಿ
ಬಾಷಾ ಶಾಸ್ತ್ರದ ವಿಷಯ ಮರೀಚಿಕೆಯಾಗುತ್ತಿದೆ ಹಾಗೂ ಬಾಷಾ ಶಾಸ್ತ್ರದ ವಿಷಯದ
ಹಿರಿಯ ವಿದ್ವಾಂಸರು ಕಡಿಮೆಯಾಗುತ್ತಿದ್ದಾರೆ.ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಭಾಷಾ ಶಾಸ್ತ್ರದ ಬೋಧನೆ ನಡೆಸುವ ಅದ್ಯಾಪಕರು ಕಡಿಮೆಯಾಗಿದ್ದಾರೆ, ಈಗಿನ ವಿದ್ಯಾರ್ಥಿಗಳು ಅಂಕಗಳ ಹಿಂದೆ ಹೋಗುತ್ತಿದ್ದಾರೆ ಆದುದರಿಂದ ನಮ್ಮ ಪೂರ್ವದ ಭಾಷೆ ಸಂಸ್ಕೃತಿ ಅಳಿಸಿ ಹೋಗುತ್ತಿದೆ ಇದು ಆತಂಕವನ್ನುಂಟುಮಾಡಿದೆ.
ಶಾಸ್ತ್ರಿಯ ಬೇರುಗಳು ಉಳಿದರೆ ಮಾತ್ರ ಹೊಸ ಹೊಸ ಜ್ಞಾನ ಲಭಿಸಲು ಸಾಧ್ಯವಿದೆ.ಈ ಕ್ಷೇತ್ರಗಳನ್ನು ಉಳಿಸಲು ಬೇಕಾದ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ನುಡಿದರು.

Leave a Reply

Your email address will not be published. Required fields are marked *

error: Content is protected !!