ತಲಪಾಡಿ: ಅಲ್ ರಹ್ಮಾ ಫೌಂಡೇಶನ್, ಫ್ರೆಂಡ್ಸ್ ಗ್ರೂಪ್ ವತಿಯಿಂದ “ರಂಝಾನ್ ಸ್ವಾಗತ” ಕಾರ್ಯಕ್ರಮ
ತಲಪಾಡಿ: ಅಲ್ ರಹ್ಮಾ ಫೌಂಡೇಶನ್ ತಲಪಾಡಿ ಹಾಗೂ ಪ್ರೆಂಡ್ಸ್ ಗ್ರೂಪ್ ತಲಪಾಡಿ ಇದರ ವತಿಯಿಂದ ರಂಝಾನ್ ಸ್ವಾಗತ ಕಾರ್ಯಕ್ರಮ ತಲಪಾಡಿ ಮರ್ಹೂಮ್ ಆಯೀಷಾ ಇಸ್ಮತ್ ವೇದಿಕೆ ಮಸೀದಿ ವಠಾರದಲ್ಲಿ ನಡೆಯಿತು.
ಸಿದ್ದೀಕ್ ಕಲ್ಲಡ್ಕ ಅವರು ರಂಝಾನ್ ಸ್ವಾಗತ ವಿಷಯದ ಕುರಿತು ಮುಖ್ಯ ಪ್ರವಚನ ಮಾಡಿದರು.
ಬದ್ರಿಯಾ ಜುಮಾ ಮಸೀದಿ ತಲಪಾಡಿ ಇದರ ಖತೀಬ್ ಮುಹಮ್ಮದ್ ರಫೀಕ್ ಅಝ್ಹರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಲ್ ರಹ್ಮಾ ಫೌಂಡೇಶನ್ ಅಧ್ಯಕ್ಷ ಇಮ್ತಿಯಾಝ್ ಬಿ.ಎಮ್.ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬದ್ರಿಯಾ ಜುಮಾ ಮಸೀದಿ ತಲಪಾಡಿ ಅಧ್ಯಕ್ಷ, ಅಲ್ ರಹ್ಮಾ ಫೌಂಡೇಶನ್ ಕಾರ್ಯದರ್ಶಿ ಅನ್ವರ್ ಕೆ.ಎಚ್, ಮತ್ತಿತರರು ಹಾಜರಿದ್ದರು.





