ಫೆಡರಲ್ ಬ್ಯಾಂಕಿನ ಸಿಬ್ಬಂದಿಯನ್ನು ಕೂಡಿ ಹಾಕಿ 15 ಲಕ್ಷ ರೂ. ದರೋಡೆ
ಚಾಲಕುಡಿ: ಕೇವಲ 2 ರಿಂದ ಮೂರು ನಿಮಿಷಗಳ ಅವಧಿಯಲ್ಲಿ ಬ್ಯಾಂಕ್ ಸಿಬ್ಬಂದಿಯನ್ನ ಕೂಡಿ ಹಾಕಿ 15 ಲಕ್ಷ ಹಣವನ್ನು ಹಾಡುಹಗಲೇ ದರೋಡೆ ಮಾಡಿದ ಘಟನೆ ಶುಕ್ರವಾರ ತ್ರಿಶೂರ್‌ನ ಚಾಲಕುಡಿಯಲ್ಲಿರುವ ಫೆಡರಲ್ ಬ್ಯಾಂಕಿನ ಪೊಟ್ಟಾ ಶಾಖೆಯಲ್ಲಿ ನಡೆದಿದೆ.
ಮಧ್ಯಾಹ್ನ 02:00 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬ್ಯಾಂಕ್ ನ ಹೆಚ್ಚಿನ ಸಿಬ್ಬಂದಿ ಊಟಕ್ಕೆ ತೆರಳಿದ್ದ ವೇಳೆ ನುಗ್ಗಿದ ದರೋಡೆಕೋರ ಸಿಬ್ಬಂದಿಗೆ ಚಾಕುವಿನಿಂದ ಬೆದರಿಕೆ ಹಾಕಿ ಅವರನ್ನು ಬಾತ್ ರೂಮ್ ನಲ್ಲಿ ಕೂಡಿ ಹಾಕಿದ್ದಾನೆ. ಬಳಿಕ ಕ್ಯಾಶ್ ಕೌಂಟರ್ ನಲ್ಲಿದ್ದ 45 ಲಕ್ಷ ಕ್ಯಾಶ್ ನಲ್ಲಿ 15 ಲಕ್ಷ ಹಣ ತೆಗೆದುಕೊಂಡು ಪರಾರಿಯಾಗಿದ್ದಾನೆ.




