ಹೈದರಾಬಾದ್: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ:
ಪ್ರಕರಣ ದಾಖಲು
ಹೈದರಾಬಾದ್: ನಾಲ್ಕು ವರ್ಷದ ಮಗು ಹಾಗೂ ಮತ್ತೊಬ್ಬ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಹೈದ್ರಾಬಾದ್ ನಗರದಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಎರಡು ಘಟನೆಗಳು ಪ್ರತ್ಯೇಕ ಘಟನೆಗಳಾಗಿದ್ದು, ನಾಲ್ಕು ವರ್ಷದ ಬಾಲಕಿಯು ತನ್ನ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಪಕ್ಕದ ಮನೆಯ ವ್ಯಕ್ತಿ ಮಗುವನ್ನು ಮನೆಗೆ ಕರೆದೋಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
23 ವರ್ಷದ ಆರೋಪಿಯು ಮಗುವಿಗೆ ಪರಿಚಯವಿದ್ದನು ಹಾಗೂ ಆಗಾಗ್ಗೆ ಮಗುವಿನ ಮನೆಗೂ ಬರುತ್ತಿದ್ದನು ಎಂದು ರಾಜೇಂದ್ರನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ದುಷ್ಕೃತ್ಯವು ಆರೋಪಿಯ ಮನೆಯಲ್ಲಿ ನಡೆದಿದೆ. ಮಗು ಎಚ್ಚರಿಕೆಯನ್ನು ಸೂಚಿಸಿದಾಗ ಆತ ಮಗುವನ್ನು ಹೊರಗೆ ಬಿಟ್ಟು ಕಳುಹಿಸಿದ್ದಾನೆ. ಮಗುವಿನ ಮನೆಯವರಿಗೆ ತಿಳಿದು ಮನೆಗೆ ಹೋಗಿ ವಿಚಾರಿಸಿದಾಗ ಘಟನೆ ಹೊರಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಬಿ.ಗಂಗಾಧರ್ ತಿಳಿಸಿದ್ದಾರೆ.




