March 25, 2026

ಸಿರಿಯಾದ ಮೇಲೆ ಅಮೆರಿಕಾದಿಂದ ವೈಮಾನಿಕ ದಾಳಿ:
ಅಲ್ ಖೈದಾ ಸಂಘಟನೆಯ ಹಿರಿಯ ನಾಯಕನ ಹತ್ಯೆ

0
image_editor_output_image-921783702-1634966590999.jpg

ಡಮಾಸ್ಕಸ್: ಅಮೆರಿಕ ನಡೆಸಿದ ಏರ್ ಸ್ಟ್ರೈಕ್ ನಲ್ಲಿ ಅಲ್ ಖೈದಾ ಸಂಘಟನೆಯ ಹಿರಿಯ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ವಾಯುವ್ಯ ಸಿರಿಯಾದಲ್ಲಿ ಶುಕ್ರವಾರ ಈ ವೈಮಾನಿಕ ದಾಳಿ ನಡೆದಿದೆ.

ಈ ದಾಳಿಯಲ್ಲಿ ಯಾವುದೇ ನಾಗರಿಕ ಸಾವು ನೋವುಗಳಾಗಿಲ್ಲ ಎಂದು ಅಮೆರಿಕ ಮಿಲಿಟರಿ ಮಾಹಿತಿ ನೀಡಿದೆ.

ಸೆಂಟ್ರಲ್ ಕಮಾಂಡ್ ವಕ್ತಾರ ಮೇಜರ್ ಜಾನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸಾವನ್ನಪ್ಪಿದ ಅಲ್ ಖೈದಾ ನಾಯಕನನ್ನು ಅಬ್ದುಲ್ ಹಮೀದ್ ಅಲ್ ಮತಾರ್ನ್ ಎಂದು ಗುರುತಿಸಲಾಗಿದೆ. MQ-9 ವಿಮಾನವನ್ನು ಬಳಸಿ ನಡೆಸಿದ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!