ಕಾಂಗ್ರೆಸ್ ಮುಖಂಡನಿಂದ ಕಿರುಕುಳ: ಗೃಹಿಣಿ ಅನುಮಾನಾಸ್ಪದವಾಗಿ ಸಾವು
ಮಂಡ್ಯ: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ನಡೆದಿದೆ.
ಜಾಹ್ನವಿ (26) ಮೃತ ಗೃಹಿಣಿ. ಮೃತ ಜಾಹ್ನವಿ ಕುಟುಂಬಸ್ಥರು ಪತಿ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. 4 ವರ್ಷದ ಹಿಂದೆ ಜಾಹ್ನವಿ, ಯಶ್ವಂತ್ ಎಂಬಾತನೊಂದಿಗೆ ವಿವಾಹವಾಗಿತ್ತು.
ಯಶ್ವಂತ್ ಕಾಂಗ್ರೆಸ್ ಮುಖಂಡನಾಗಿದ್ದನು. ಮದುವೆಯಾದಗಿನಿಂದಲೂ ಜಾಹ್ನವಿಗೆ ಕಿರುಕುಳ ನೀಡುತ್ತಿದ್ದ ಹಾಗೂ ಕುಡಿದು ಮನಸ್ಸೋ ಇಚ್ಛೆ ಹಲ್ಲೆ ಮಾಡ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.




