March 19, 2026

ಮಡಿಕೇರಿ: ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿಯ ಮೃತದೇಹ ಹೊಳೆಯಲ್ಲಿ ಪತ್ತೆ

0
image_editor_output_image694422820-1739574312925.jpg

ಮಡಿಕೇರಿ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಜವಾಹರ್ ನವೋದಯ ವಿದ್ಯಾಲಯದ ಪಿಯುಸಿ ವಿದ್ಯಾರ್ಥಿ ಎಂ.ಅಮಿತ್(17)ನ ಮೃತದೇಹ ಸಮೀಪದ ಕೂಟುಹೊಳೆಯಲ್ಲಿ ಗುರುವಾರ ಪತ್ತೆಯಾಗಿದೆ.

ನವೋದಯ ವಿದ್ಯಾಸಂಸ್ಥೆಯ ಸಿಬಂದಿ ಆನಂದ್‌ ಅವರ ಪುತ್ರ ಎಂ.ಎ.ಅಮಿತ್ ಫೆ.11ರಂದು ಬೆಳಗ್ಗೆ 7 ಗಂಟೆಗೆ ಶಾಲಾ ಆವರಣದಲ್ಲಿರುವ ಸಿಬಂದಿಯ ವಸತಿ ಗೃಹದಿಂದ ಶಾಲೆಗೆಂದು ತೆರಳಿದಾತ ಮುಖ್ಯ ದ್ವಾರದ ಮೂಲಕ ರಸ್ತೆಗೆ ಸಾಗಿದ್ದಾನೆ ಎಂದು ತಿಳಿದು ಬಂದಿತ್ತು.

ಇದನ್ನು ಗಮನಿಸಿದ ವಿದ್ಯಾಸಂಸ್ಥೆಯ ರಕ್ಷಣ ಸಿಬಂದಿಯೊಬ್ಬರು, ಆನಂದ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತತ್‌ಕ್ಷಣ ಆನಂದ್ ಆಗಮಿಸಿದರಾದರೂ ಪುತ್ರನನ್ನು ಸಾಧ್ಯವಾಗದೆ ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದರು.

Leave a Reply

Your email address will not be published. Required fields are marked *

error: Content is protected !!