March 19, 2026

ಕಾವಳಕಟ್ಟೆ: ವಕ್ಫ್ ತಿದ್ದುಪಡಿ ಮಸೂದೆ ಪ್ರತಿಗೆ ಬೆಂಕಿ ಹಚ್ಚಿ ಪ್ರತಿಭಟನೆ

0
IMG-20250214-WA0012.jpg

ಕಾವಳಕಟ್ಟೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾವಳಕಟ್ಟೆ ಬೂತ್ ಸಮಿತಿ ವತಿಯಿಂದ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆಯನ್ನು ವಿರೋದಿಸಿ ಕಾವಳಕಟ್ಟೆ ದೂಮಲಿಕೆಯಲ್ಲಿ ಎಸ್ಡಿಪಿಐ ಬೂತ್ ಅಧ್ಯಕ್ಷರಾದ ಇಮ್ರಾನ್ ರವರ ನೇತೃತ್ವದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಪ್ರತಿ ಗೆ ಬೆಂಕಿ ಹಚ್ಚಿಸಿ ಪ್ರತಿಭಟನೆ ಮಾಡಲಾಯಿತು.

ವಕ್ಫ್ ತಿದ್ದುಪಡಿ ಮಸೂದೆಯು ಕೇಂದ್ರ ಸರ್ಕಾರದ ಹಿಡನ್ ಅಜೆಂಡಾವಾಗಿದ್ದು ಈ ಮಸೂದೆಯನ್ನು ದೇಶದ ಜಾತ್ಯತೀತರು ಒಪ್ಪಲು ಸಾಧ್ಯವಿಲ್ಲ. ವಕ್ಫ್ ಆಸ್ತಿಯು ಮುಸಲ್ಮಾನ ಸಮುದಾಯದ ಹಿರಿಯರು ಮುಸ್ಲಿಮರ ಕಲ್ಯಾಣಕ್ಕಾಗಿ ನೀಡಿದ ಆಸ್ತಿಯಾಗಿದೆ. ಇದು ಮುಸಲ್ಮಾನರ ಹಕ್ಕಾಗಿದ್ದು ಇದರಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಸಹಿಸಲಾರೆವು. ಮುಸ್ಲಿಮರನ್ನು ಟಾರ್ಗೆಟ್ ಮಾಡಿಕೊಂಡು ರಚಿಸಲಾದ ಈ ಮಸೂದೆಯನ್ನು ದೇಶದಲ್ಲಿ ಎಸ್‌ಡಿಪಿಐ ಸೇರಿದಂತೆ ಜಾತ್ಯತೀತರು, ಉಲೆಮಾ ನಾಯಕರೆಲ್ಲರೂ ವಿರೋಧಿಸಿದ್ದಾರೆ ಎಂದು ಸರಪಡಿ ಬ್ಲಾಕ್ ಉಪಾಧ್ಯಕ್ಷರಾದ ಉಸ್ಮಾನ್ ಅಲಂಗಾಲು ಮಾತಾನಾಡಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೂತ್ ಹಾಗೂ ಬ್ಲಾಕ್ ಮಟ್ಟದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಹಿತೈಷಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!